“ಸದೃಢ ದೇಹ ಮತ್ತು ಆರೋಗ್ಯಕ್ಕೆ ಕ್ರೀಡೆ ಸಹಕಾರಿ” -ವಿದ್ಯಾಶಂಕರ್ ದಂಬೆ
ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವದ ಸವಿನೆನಪಿಗಾಗಿ ಶತಸಂಭ್ರಮದ ಅಂಗವಾಗಿ ಆಯೋಜಿಸಿದ ಎರಡು ದಿನಗಳ “ಸಾರಸ್ವತ ಕ್ರಿಕೆಟ್ ಪಂದ್ಯಾಟವು ವಿವೇಕಾನಂದ ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಕ್ರೀಡಾಂಗಣ ನೆಹರೂನಗರದಲ್ಲಿ ನಡೆಯಿತು .
ದೈಹಿಕ ಶಿಕ್ಷಕರು ,ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ವಿದ್ಯಾಶಂಕರ್ ದಂಬೆ ಕಾರ್ಯಕ್ರಮ ಉದ್ಘಾಟಿಸಿ ,ಸದೃಢ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದರು .
ವೇದಿಕೆಯಲ್ಲಿ ಮಾಜಿ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕತ್ತಲಕಾನ ,ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರಿನ ಅಧ್ಯಕ್ಷ ಬಾಲಕೃಷ್ಣ ನಾಯಕ್ ತೆಂಕಿಲ ,ಬಿಆರ್,ಎಸ್ ,ಎಸ್ ಸಂಘ ಸುಳ್ಯದ ಅಧ್ಯಕ್ಷ ಹೇಮಂತ್ ಕುಮಾರ್ ಕಂದಡ್ಕ ,ಪುತ್ತೂರು ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ ,ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಂಘದ ನಿರ್ದೇಶಕ ದೇವಿಪ್ರಸಾದ್ ಕಲ್ಲಾಜೆ ,ಭಾ.ಗೌ.ಸಾ.ಬ್ರಾ ಸಮಾಜ ಸೇವಾ ಸಂಘ ಪುತ್ತೂರಿನ ನಿರ್ದೇಶಕ ಗೋಪಾಲಕೃಷ್ಣ ಕುಂಟಿನಿ ಉಪಸ್ಥಿತರಿದ್ದರು .ಉಪಾಧ್ಯಕ್ಷ ಹರೀಶ್ ಬೋರ್ಕರ್ ಸ್ವಾಗತಿಸಿ ,ನಿರ್ದೇಶಕ ವಿಷ್ಣು ಪ್ರಭು ವಂದಿಸಿದರು .
ಸಮಾಜ ಬಾಂಧವರಿಗಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 25ಕ್ಕೂ ಅಧಿಕ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು ..