ಸರಣಿ ಹತ್ಯಾ ಕೇಸ್ ನಲ್ಲಿ ಕಳೆದ 20 ವರ್ಷಗಳಿಂದ ನೇಪಾಳ ಜೈಲಿನಲ್ಲಿದ್ದ ʼಬಿಕಿನಿ ಮರ್ಡರರ್ʼ ಚಾರ್ಲ್ಸ್ ಶೋಭರಾಜ್‌ನನ್ನು ನೇಪಾಳದ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಕಳೆದ 20 ವರ್ಷಗಳಿಂದ ಜೈಲಿನಲ್ಲಿದ್ದ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿ ಸರಕಾರದ ಖರ್ಚಿನಲ್ಲಿ 15 ದಿನಗಳ ಒಳಗಾಗಿ ತಾಯಿನಾಡಿಗೆ ಕಳುಹಿಸಿಕೊಡುವಂತೆ ನೇಪಾಳ ಉನ್ನತ ನ್ಯಾಯಾಲಯ ಸರಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಆತನನ್ನು ಬಿಡುಗಡೆಗೊಳಿಸಲಾಗಿದೆ.