ಉಜಿರೋಡಿ ಮಿಸ್ಬಾಹುಸ್ಸುನ್ನ ಯೂತ್‌ಫ್ರೆಂಡ್ ಇದರ 9 ನೇ ವಾರ್ಷಿಕೋತ್ಸವ

0

ಅಲ್ಲಾಹನ ಅನುಗ್ರಹವನ್ನು ಮರೆತು ಜೀವಿಸುವ ಮುಸ್ಲಿಮರು ನಾವಾಗಬಾರದು: ಪೇರೋಡ್ ಉಸ್ತಾದ್

ಪುತ್ತೂರು: ಈ ಭೂಮಿ ಮೇಲಿರುವ ಪ್ರತೀಯೊಂದು ವಸ್ತುವನ್ನು ಅಲ್ಲಾಹನು ಮನುಷ್ಯರಿಗಾಗಿ ಸೃಷ್ಟಿಸಿದ್ದಾನೆ, ನಾವು ಹುಟ್ಟಿದಾಗಿನಿಂದ ಸಾಯುವ ತನಕ ಭೂಮಿ ಮೇಲೆ ಬದುಕುವ ತನಕ ನಮಗೆ ಬೇಕಾದ ಎಲ್ಲಾ ಅವಶ್ಯಕತೆಗಳು ಅಲ್ಲಾಹನ ಅನುಗ್ರಹವಾಗಿದೆ ಅದನ್ನು ನಾವು ಮರೆಯಬಾರದು , ಅಲ್ಲಾಹನ ಸ್ಮರಣೆ ನಿತ್ಯವೂ ನಮ್ಮದಾಗಲಿ ಎಂದು ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಹೇಳಿದರು.


ಅವರು ಕುಂಬ್ರ ಉಜಿರೋಡಿಯ ಮಿಸ್ಬಾಹುಸ್ಸುನ್ನ ಯೂತ್‌ಫೆಂಢ್ಸ್ ಇದರ 9 ನೇ ವಾರ್ಷಿಕೋತ್ಸವ ಪ್ರಯುಕ್ತ ಮರ್‌ಹೂಂ ಆಟಕೋಯ ತಂಙಳ್ ವೇದಿಕೆ ಮೈದಾನಿಮೂಲೆಯಲ್ಲಿ ನಡೆದ ತಾಜುಲ್ ಉಲಮಾ ಹಾಗೂ ಇನ್ನಿತರ ಅಗಲಿದ ನೇತಾರರ ಅನುಸ್ಮರಣಾ ಸಂಗಮ ಹಾಗೂ ಏಕದಿನ ಮತಪ್ರಭಾಷಣದಲ್ಲಿ ಧಾರ್ಮಿಕ ಪ್ರವಚನ ನೀಡಿದರು.


ಆಧುನಿಕತೆಯ ಹೆಸರಿನಲ್ಲಿ ನಾವು ಧರ್ಮ ಸಮ್ಮತವಲ್ಲದ ಯಾವುದೇ ಕಾರ್ಯಗಳನ್ನು ಮಾಡಬಾರದು. ತಿನ್ನುವ ಆಹಾರವನ್ನು ವೇಸ್ಟ್ ಮಾಡುವ ಅನೇಕ ಪ್ರವೃತ್ತಿಗಳು ಎಲ್ಲೆಡೆ ನಡೆಯುತ್ತಿದೆ ಇದು ಅಲ್ಲಾಹನು ವಿರೋಧಿಸಿದ ಕಾರ್ಯವಾಗಿದೆ. ಇಲ್ಲಿ ಯಾವುದನ್ನೂ ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ಅಲ್ಲಾಹನು ನಮಗೆ ಕೊಟ್ಟ ಸಂಪತ್ತನ್ನು ಒಳಿತಿಗಾಗಿ ಬಳಸಬೇಕು, ಕೆಟ್ಟ ಕಾರ್ಯಗಳಿಗೆ ಯವುದೇ ಕಾರಣಕ್ಕೂ ಬಳಸಬಾರದು ಎಂದು ಹಿತವಚನ ನೀಡಿದರು.

ಈ ಭೂಮಿ ಮೇಲೆ ನಾವು ಹೇಗೆ ಬದುಕುತ್ತಿದ್ದೇವೆ, ಯಾತಕ್ಕಾಗಿ ಬದುಕುತ್ತಿದ್ದೇವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಅಲ್ಲಾಹನನ್ನು ಮರೆತು ನಾವು ಜೀವಿಸಿದರೆ ನಮ್ಮ ಅಂತ್ಯ ಭೀಕರವಾಗಿರುವುದು ಎಂದು ಎಚ್ಚರಿಸಿದ ಅವರು ಯಾವುದೇ ಕಾರಣಕ್ಕೂ ನಾವು ಕುಟುಂಬದಲ್ಲಿ ದ್ವೇಷವನ್ನು ಸೃಷ್ಟಿಸಬಾರದು. ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು. ಯುವ ಸಮೂಹ ಇಂದು ಅನಿಸ್ಲಾಮಿಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು ಇದು ದುರಂತವಾಗಿದೆ. ನಾವು ಹೇಗೆ ಬದುಕಬೇಕು ಎಂಬುದನ್ನು ಪ್ರವಾದಿಯವರು ನಮಗೆ ಕಲಿಸಿಕೊಟ್ಟಿದ್ದಾರೆ ಆ ಪ್ರಕಾರ ನಾವು ಇಲ್ಲಿ ಬದುಕು ಸಾಗಿಸಿದರೆ ನಾವ ಉ ನೆಮ್ಮದಿಯಿಂದ ಜೀವನ ಮಾಡಬಹುದಾಗಿದೆ. ಯೂಸುಫ್ ಹಾಜಿ ಕೈಕಾರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ತಂದೆ ತಾಯಿ ಮನಸ್ಸು ನೋಯಿಸದಿರಿ
ಮಕ್ಕಳು ಯಾವುದೇ ಕಾರಣಕ್ಕೂ ತಂದೆ , ತಾಯಿಯ ಮನಸ್ಸು ನೋಯಿಸುವ ಕೆಲಸವನ್ನು ಮಾಡಬಾರದು. ಅವರಿಗೆ ಕೊಡುವ ಗೌರವವನ್ನು ನಾವು ಕೊಡಬೇಕು ಇದು ಕಡ್ಡಾಯವಾಗಿದೆ ಮತ್ತು ಅಲ್ಲಾಹನು ಕುರ್‌ಆನಿನಲ್ಲಿ ಈ ವಿಚಾರದಲ್ಲಿ ಎಚ್ಚರಿಕೆಯನ್ನು ನೀಡಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಅಲ್ಲಾಹನು ಮೆಚ್ಚದ ಕಾರ್ಯವನ್ನು ನಾವು ಯಾವುದೇ ಸಂಧರ್ಭದಲ್ಲಿ ಮಾಡಬಾರದು ಎಂದು ಹೇಳಿದರು. ಕುಟುಂಬ ಬಂಧವನ್ನು ಗಟ್ಟಿಗೊಳಿಸಬೇಕು. ಇಸ್ಲಾಮಿನಲ್ಲಿ ಕೋಮುವಾದಕ್ಕೆ ಎಂದಿಗೂ ಅವಕಾಶವಿಲ್ಲ. ನೆರೆಹೊರೆಯ ಯಾವುದೇ ಧರ್ಮದ ವ್ಯಕ್ತಿಯಾದರೂ ಆತನೊಂದಿಗೆ ನಾವು ಸೌಹಾರ್ಧತೆಯಿಂದ ಬಾಳ್ವೆ ನಡೆಸಬೇಕು. ಹಸಿದವನಿಗೆ ಅನ್ನ ನೀಡುವ ಸದ್ಗುಣ ನಮ್ಮಲ್ಲಿರಬೇಕು. ಮಾಧಕ ವ್ಯವಸನಗಳಿಂದ ದೂರವಾಗಿ ನಾವು ಸ್ವಚ್ಚ ಬದುಕು ಸಾಗಿಸುವಂತಾಗಬೇಕು. ರಾತ್ರಿಯನ್ನು ನಿದ್ದೆಗೆ ಅಲ್ಲಾಹನು ಮೀಸಲಿಟ್ಟಿದ್ದು ನಿದ್ದೆಗೆಟ್ಟು ಮೋಜು ಮಸ್ತಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ತಾಕೀತು ನೀಡಿದರು.

ನಮ್ಮ ಜೀವನ ಶೈಲಿ ಅಲ್ಲಾಹನಿಗೆ ತೃಪ್ತಿದಾಯಕವಾಗಿರಲಿ: ಮುಝಮ್ಮಿಲ್ ತಂಙಳ್
ಮೈದಾನಿಮೂಲೆ ಜಮಾತ್ ಕಮಿಟಿ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಮುಝಮ್ಮಿಲ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾವು ಮಾಡುವ ಪ್ರತೀಯೊಂದು ಸತ್ಕರ್ಮಗಳು ಅಲ್ಲಾಹನು ತೃಪ್ತಿಪಡುವ ರೀತಿಯಲ್ಲಿರಬೇಕು.ನಾವು ಧರ್ಮದ ಆಶಯವನ್ನು ಮೊದಲು ಕಲಿತುಕೊಳ್ಳಬೇಕು ಬಳಿಕ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಲ್ಲಿ ಮಾತ್ರ ನಾವು ಅಹ್ಲ್‌ಸುನ್ನತ್ ಜಮಾತಿನ ಅನುಯಾಯಿಗಳಾಗಿರಲು ಸಾಧ್ಯ ಎಂದು ಹೇಳಿದರು.ನಮ್ಮನ್ನಗಲಿದ ಉಲಮಾಗಳು ಧರ್ಮಕ್ಕಾಗಿಮ ಅನೇಕ ತ್ಯಾಗಗಳನ್ನು ಮಾಡಿದವರಾಗಿದ್ದು ಆವರ ಆದರ್ಶ ಜೀವನ ನಮಗೆ ನಿತ್ಯ ಪಾಠವಾಗಬೇಕು ಎಂದು ಹೇಳಿದರು. ದುವಾ ನೆರವೇರಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ಉಲಮಾಗಳ ಮರಣ ವಿಶ್ವಕ್ಕೆ ನಷ್ಟ; ಸಿರಾಜುದ್ದೀನ್ ಸಖಾಫಿ
ಪ್ರಾಸ್ತಾವಿಕವಾಗಿ ಮಾತನಾಡಿದ ಬನ್ನೂರು ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಸಖಾಫಿ ಮಾತನಾಡಿ ದೀನಿ ಉಲಮಾಗಳ ಮರಣ ಅದು ವಿಸ್ವಮಟ್ಟದ ನಷ್ಟವಾಗಿದೆ. ಒಬ್ಬ ಉಲಮಾ ಮರಣಹೊಂದಿದರೆ ಅವರ ಜೊತೆ ಅವರ ವಿದ್ಯೆಯೂ ಮರಣಹೊಂದುತ್ತದೆ ಇದು ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ ಮತ್ತು ಉಲಮಾಗಳ ಮರಣ ಲೋಕ ಅವಸಾನದ ಒಂದು ಘಟನೆಯಾಗಿದೆ ಎಂಬುದನ್ನು ಹದೀಸ್ ಉಲ್ಲೇಖಿಸಿ ವಿವರಣೆ ನೀಡಿದರು. ತಾಜುಲ್ ಉಮಾ ಉಳ್ಳಾಲ ತಂಙಳ್, ಬೇಕಲ್ ಉಸ್ತಾದರ ಮರಣವು ಸಮುದಾಯಕ್ಕೆ ಅಪಾರವಾದ ನಷ್ಟವಾಗಿದೆ ಎಂಬುದು ಅವರ ಮರಣದ ಬಳಿಕ ಎಲ್ಲರಿಗೂ ಗೊತ್ತಾಗಿದೆ. ಉಲಮಾಗಳ ಜೊತೆ ನಾವು ನಿಕಟ ಸಂಪರ್ಕ ಉಳ್ಳವರಾಗಬೇಕು ಎಂದು ಹೇಳಿದರು.

ಸಮಾಜಮುಖಿ ಕೆಲಸವೇ ನಮ್ಮ ಧ್ಯೇಯ: ಹಕೀಂ ಉಜಿರೋಡಿ
ಯುವಕರೇ ಸೇರಿಕೊಂಡು ನಾವು ಸ್ಥಾಪಿಸಿರುವ ಮಿಸ್ಬಾಹುಸ್ಸುನ್ನ ಯೂತ್ ಫೆಡರೇಶನ್ ಎಂಬ ಸಂಘಟನೆಯು ಕಳೆದ 9 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮಗೆ ಧಾರ್ಮಿಕ ವಿಚಾರಗಳನ್ನು ಕಲಿಯುವ ಮತ್ತು ಇತರರಿಗೆ ಧಾರ್ಮಿಕ ಅರಿವು ನೀಡುವ ಉದ್ದೇಶದಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ನಮ್ಮ ಸಂಘಟನೆ ಹಮ್ಮಿಕೊಳ್ಳುತ್ತಿದೆ. ಸಂಘಟನೆಯು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರ,ಸಾಮಾಜಿಕ ಮತ್ತು ದೀನ ದಲಿತರಿಗೆ ನೆರವು ನೀಡುವ ಯೋಜನೆಯನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಸಂಘಟನೆಯಾಗಿ ಬೆಳೆದು ಬರಲಿದ್ದು ಊರಿನ ಎಲ್ಲಾ ಯುವಕರ ಸಹಕಾರದಿಂದ ಮುಂದೆ ಉತ್ತಮ ಕಾರ್ಯಗಳನ್ನು‌ಮಾಡುವ ಮೂಲಕ ಸಮಾಜಮುಖಿ ಸಂಘಟನೆಯಾಗಿ ಹೊರ ಹೊಮ್ಮಲಿದೆ.
ಹಕೀಂ ಉಜಿರೋಡಿ, ಸ್ಥಾಪಕರು ಮಿಸ್ಬಾಹಿಸ್ಸುನ್ನ ಯೂತ್ ಫೆಡರೇಶನ್ ,ಉಜಿರೋಡಿ

ಮೈದಾನಿಮೂಲೆ ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕೆ ಪಿ, ಯೂಸುಫ್ ಗೌಸಿಯಾ, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಹಾಜಿ ಮುಳಿಯಡ್ಕ, ಅಬ್ದುಲ್ ರಹಿಮಾನ್ ಹಾಜಿ ಬಾಳಯ, ಕೆಯ್ಯೂರು ಗ್ರಾಪಂ ಸದಸ್ಯರಾದ
ಅಬ್ದುಲ್ ಖಾದರ್ ಹಾಜಿ ಮೇರ್ಲ, ಶಾಕಿರ್ ಹಾಜಿ ಮಿತ್ತೂರು, ಬನ್ನೂರು ಜುಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬನ್ನೂರು, ಇಬ್ರಾಹಿಂ ಗಡಿಪ್ಪಿಲ, ಯೂಸುಫ್ ಗಡಿಪ್ಪಿಲ, ಆದಂ ಹಾಜಿ ಯಾಸಿನ್ ಚಿಕನ್ ಸೆಂಟರ್, ಉಮರ್ ಹಾಜಿ ಬನ್ನೂರು, ಯೂಸುಫ್ ಎ ಕೆ, ಜಲೀಲ್ ಹಾಜಿ ಕೆಎಚ್, ಇಸ್ಮಾಯಿಲ್ ನಾಟೆಕಲ್, ಇಸ್ಮಾಯಿಲ್ ಪಡ್ಪಿನಂಗಡಿ,ಸಂಪ್ಯ ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಸಂಪ್ಯ, ಉದ್ಯಮಿ ಅಬೂಬಕ್ಕರ್ ಸಾರೆಪುಣಿ, ಉಜಿರೋಡಿ ಮಿಸ್ಬಾಹುಸ್ಸುನ್ನ ಯೂತ್‌ಫೆಡರೇಶನ್ ಗೌರವಾಧ್ಯಕ್ಷರಾದ ಅಶ್ರಫ್ ಯು ಕೆ ಉಜಿರೋಡಿ, ಕರೀಂ ಕಾವೇರಿ, ಇಬ್ರಾಹಿಂ ಹಾಜಿ ಅರಫ ಈಶ್ವರಮಂಗಲ, ಕುಂಬ್ರ ಬದ್ರಿಯಾ ನಗರ ಜುಮಾ ಮಸೀದಿ ಅಧ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್ , ಮಹಮ್ಮದ್ ಲತೀಫ್ ಬೊಳ್ವಾರ್, ಮುಸ್ತಫಾ ನ್ಯಾಚುರಲ್ ಸ್ಟೋನ್, ಅಶ್ರಫ್ ಕೆಜಿಎನ್ ಕುಂಬ್ರ, ಅಬೂನಜ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಚೆನ್ನಾರ್ ಮಸೀದಿ ಅಧ್ಯಕ್ಷ ಶಾಫಿ ಚೆನ್ನಾರ್, ಕಲಂದರ್ ಕಬಕ, ಯೂಸುಫ್ ಸವಣೂರು, ಹಾರಿಸ್ ಅಡ್ಕ, ಮೈದಾನಿಮೂಲೆ ಜಮಾತ್ ಕಮಿಟಿ ಉಪಾಧ್ಯಕ್ಷ ಹಂಝ ಯು ಕೆ,ಪ್ರ. ಕಾರ್ಯದರ್ಶಿ ಮುನೀರ್ ಯು ಕೆ, ರಫೀಕ್ ಅಲ್ ರಾಯ,  ಯೂಸುಫ್ ಹಾಜಿ ನೀರ್ಪಾಡಿ, ಸದರ್ ಮುಅಲ್ಲಿಂ ಉಮ್ಮರ್ ಫಾರೂಕ್ ಮದನಿ ಕೊಡಪ್ಪದವು, ಮೈದಾನಿಮೂಲೆ ಸಹ ಅಧ್ಯಾಪಕರಾದ ಅಬ್ದುಲ್‌ರಹಿಮಾನ್ ಮಹ್‌ಲರಿ ಮಡಿಕೇರಿ, ಮಹಮ್ಮದ್ ಸಅದಿ ಕಬಕ, ಕೆ ಪಿ ಇಬ್ರಾಹಿಂ ಹಾಜಿ, ಯು ಕೆ ಇಬ್ರಾಹಿಂ, ಮುಹಿಯುದ್ದೀನ್ ಮುಸ್ಲಿಯಾರ್ ಯು ಕೆ, ಹಸೈನಾರ್ ಮದನಿ ಮುರುವ, ಅಬ್ದುಲ್ ರಝಾಕ್ ಅಲ್‌ಇಶಾಮಿ, ಮೈದಾನಿಮೂಲೆ ಮಸೀದಿ ಕಾರ್ಯದರ್ಶಿ ಹಮೀದ್ ಮುಳಿಯಡ್ಕ, ಎಸ್ಸೆಸ್ಸೆಫ್ ಮೈದಾನಿಮೂಲೆ ಶಾಖೆ ಅಧ್ಯಕ್ಷ ಅಸ್ಕರ್ ನೀರ್ಪಾಡಿ, ಮುಹಮ್ಮದ್ ಉಜಿರೋಡಿ,ಅಬ್ಬಾಸ್ ಮುಡಾಲ, ಹಕೀಂ ಯುಕೆ ಸ್ಥಾಪಕಾಧ್ಯಕ್ಷರು ಎಂಎಸ್‌ವೈಎಫ್, ಮಿಸ್ಬಾಹುಸ್ಸುನ್ನ ಯೂತ್‌ಫ್ರೆಂಡ್ಸ್ ಅಧ್ಯಕ್ಷ ಶರೀಫ್ ಯುಕೆ, ಮಹಮ್ಮದ್ ಕೆ ಎ ಮೈದಾನಿಮೂಲೆ, ಮೈದಾನಿಮೂಲೆ ಯಂಗ್‌ಮೆನ್ಸ್ ಅಧ್ಯಕ್ಷರಾದ ಶಫೀಕ್ ಎಂ ಎಂ, ಎಂಎಸ್‌ವೈಫ್ ಪ್ರ. ಕಾರ್ಯದರ್ಶಿ ಹಾರಿಸ್ ಯುಕೆ, ಕೋಶಾಧಿಕಾರಿ ಸಫ್‌ವಾನ್ ಯು ಕೆ, ಮೈದಾನಿಮೂಲೆ ಜಮಾತ್ ಕಾರ್ಯದರ್ಶಿ ಖಾಸಿಂ ಯು ಕೆ ಮೊದಲಾದವರು ಉಪಸ್ತಿತರಿದ್ದರು.

ಮೈದಾನಿಮೂಲೆ ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬುರ್ದಾ ಮಜ್ಲಿಸ್ ಆಲಾಪನೆ ನಡೆಯಿತು. ಕಾರ್ಯಕ್ರಮದ ಕೊನೇಯಲ್ಲಿ ತಬರ್ರುಕ್ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here