ದ.27 : ಸುಳ್ಯಪದವು ಶ್ರೀಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ: ಡಿ.29: ಶ್ರೀಅಯ್ಯಪ್ಪ ಸ್ವಾಮಿ ಉಬ್ಬು ಛಾಯಾಚಿತ್ರದ ಪುನಃ ಪ್ರತಿಷ್ಠೆ

0

ಪುತ್ತೂರು: ಪಡುವನ್ನೂರು ಗ್ರಾಮದ ಸುಳ್ಯಪದವು ಶ್ರೀಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ ಡಿ.೨೭ರಿಂದ ೩೧ರವರೆಗೆ ಕುಂಟಾರು ವಾಸುದೇ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ನಡೆಯಲಿದೆ.

ಡಿ.೨೭ರಂದು ಸಂಜೆ ಹಸಿರುವಾಣಿ ಕಾಣಿಕೆ ಮೆರವಣಿಗೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಗೀತಾಪಾರಾಯಣ ನಡೆಯಲಿದೆ. ಡಿ.೨೮ರಂದು ಬೆಳಿಗ್ಗೆ ೧೦ರಿಂದ ಕುಣತ ಭಜನೆ, ಮಹಾಪೂಜೆ ಪ್ರಸಾದ ವಿತರಣೆ, ಅಪರಾಹ್ನ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಸಾರಥ್ಯದಲ್ಲಿ ಯಕ್ಷ ಗಾನ ವೈಭವ, ಸಂಜೆ ೫ರಿಂದ ತಂತ್ರಿವರ್ಯರ ಆಗಮನ, ಆರ್ಟ್ ಆಫ್ ಲಿವಿಂಗ್‌ನಿಂದ ಗಾನ ಧ್ಯಾನ ಮತ್ತು ಜ್ಞಾನ, ರಾತ್ರಿ ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ವಾಸ್ತು ಪುಣ್ಯಹಾಂತ ನಡೆಯಲಿದೆ. ಡಿ.೨೯ರಂದು ಬೆಳಿಗ್ಗೆ ಗಣಪತಿ ಹೋಮ, ಭಜನೆ, ಮಧ್ಯಾಹ್ನ ಶ್ರೀಅಯ್ಯಪ್ಪ ಸ್ವಾಮಿ ಉಬ್ಬು ಛಾಯಾಚಿತ್ರದ ಪುನಃ ಪ್ರತಿಷ್ಠಾ ಕಾರ್ಯಕ್ರಮ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಕೃಷ್ಣಕಿಶೋರ್ ಪೆರ್ಮುಖ ಮತ್ತು ಬಳಗದವರಿಂದ ಭಕ್ತಿ ಗಾನ ರಸಮಂಜರಿ, ಸಂಜೆ ದುರ್ಗಾಪೂಜೆ, ರಾತ್ರಿ ಭರತನಾಟ್ಯ ಕಾರ್ಯಕ್ರಮ, ರಾತ್ರಿ ೧೦ರಿಂದ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯ ಮತ್ತು ರಚನೆಯ ಕುಸಲ್ದರಸೆ ನವೀನ್ ಡಿ.ಪಡೀಲ್ ಸಲಹೆ ಸಹಕಾರದೊಂದಿಗೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಅಲೇ ಬುಡಿಯೆರ್‌ಗೆ ತುಳು ಹಾಸ್ಯ ನಾಟಕ ನಡೆಯಲಿದೆ. ಡಿ.೩೦ರಂದು ಸೂಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧಏಕಾಹ ಭಜನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಪಾಲೆಕೊಂಬು ಮೆರವಣಿಗೆ, ಭಜನಾ ಮಂಗಲೋತ್ಸವ, ದೀಪೋತ್ಸವ, ಶರಣಂ ಘೋಷ, ಅಪ್ಪ ಸೇವೆ ನಡೆಯಲಿದೆ. ರಾತ್ರಿ ೧೦.೩೦ರಿಂದ ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಡಿ.೩೧ರಂದು ಬೆಳಿಗ್ಗೆ ೪ರಿಂದ ಅಯ್ಯಪ್ಪ ವೃತಾಧಾರಿಗಳಿಂದ ಕೆಂಡಸೇವೆ, ಪ್ರಸಾದ ವಿತರಣೆ ನಡೆಯಲಿದೆ.

ಸಭಾ ಕಾರ್ಯಕ್ರಮ: ಡಿ.೨೯ರಂದು ಸಂಜೆ ೫ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಗುರುಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮತ್ತು ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪುಜಾರಿ, ಶಾಸಕ ಸಂಜೀವ ಮಠಂದೂರು, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸದಸ್ಯ ಹರೀಶ್ ಕುಮಾರ್ ಭಾಗವಹಿಸಲಿದ್ದಾರೆ. ಸ್ಥಳದಾನಿ ಪ್ರಭಾಕರ ನಾಯಕ್ ಇಂದಾಜೆ ಮತ್ತು ಜಯಲಕ್ಷ್ಮೀ ಡಿ.ನಾಯಕ್ ಇಂದಾಜೆಯವರಿಗೆ ಸನ್ಮಾನ ನಡೆಯಲಿದೆ. ವಾಸ್ತುಶಿಲ್ಪಿ ರಮೇಶ್ ಕಾರಂತ್, ಜ್ಯೋತಿಷ್ಯ ಮಹಾಲಿಂಗೇಶ್ವರ ಶರ್ಮ, ಮೇಸ್ತ್ರಿ ನಾಗರಾಜ, ಕಾಷ್ಠಶಿಲ್ಪಿ ಭಾಸ್ಕರ ಆಚಾರ್ಯರವರಿಗೆ ಗೌರವಾರ್ಪಣೆ ನಡೆಯಲಿದೆ.

ನಾಳೆ ಹೊರೆಕಾಣಿಕೆ

ಡಿ.೨೭ರಂದು ಸಂಜೆ ೪ರಿಂದ ಕುತ್ಯಾಳ ಮಹಾವಿಷ್ಣು ದೇವಸ್ಥಾನದಿಂದ ಶ್ರೀಅಯ್ಯಪ್ಪ ಸ್ವಾಮಿ ಉಬ್ಬು ಛಾಯಾಚಿತ್ರ ಮತ್ತು ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ. ಸಿಂಗಾರಿ ಮೇಳದೊಂದಿಗೆ ಮಂದಿರದ ಮುಖ್ಯದ್ವಾರದ ಬಳಿ ಒಟ್ಟಾಗಿ ಮಂದಿರದಲ್ಲಿ ಸಮಾಪನಗೊಳ್ಳುವುದು.

LEAVE A REPLY

Please enter your comment!
Please enter your name here