




ಮಂಗಳೂರು : ಸುರತ್ಕಲ್ ಕೃಷ್ಣಾಪುರದ ನಾಲ್ಕನೇ ಬ್ಲಾಕ್ ನೈತಂಗಡಿ ಬಳಿ ಎರಡು ದಿನಗಳ ಹಿಂದೆ ನಡೆದ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.



ಶೈಲೇಶ್ ಯಾನೆ ಶೈಲು(21) ನವೀನ್ (25) ಮತ್ತು ಪವನ್ ಬಂಧಿತರಾಗಿದ್ದಾರೆ.






ಬಂಧಿತರ ಪೈಕಿ ಇಬ್ಬರು ಕೊಲೆ ಕೃತ್ಯ ಎಸಗಿದ ಆರೋಪಿಗಳಾಗಿದ್ದು ಇನ್ನೋರ್ವ ಆರೋಪಿಗಳು ಪರಾರಿಯಾಗಲು ನೆರವಾದವನಾಗಿದ್ದಾನೆ. ಆರೋಪಿಗಳನ್ನು ಭಾನುವಾರ ರಾತ್ರಿ ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಷ್ಟಡಿಗೆ ಪಡೆಯಲಾಗುವುದು, ಬಂಧಿತರ ಪೈಕಿ ಇಬ್ಬರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಸುರತ್ಕಲ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದೆಂದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.










