ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಮು.ಮಂತ್ರಿ ಹೇಳಿಕೆಯಿಂದ ಜಿಲ್ಲೆಯಲ್ಲಿ ಸರಣಿ ಕೊಲೆ

0

ಮಂಗಳೂರು : ಕೃಷ್ಣಾಪುರದಲ್ಲಿ ನಡೆದ ಜಲೀಲ್‌ ಹತ್ಯೆ ಖಂಡಿಸಿ ಡಿ.27ರಂದು ಮಂಗಳೂರಿನಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು. ಕ್ಲಾಕ್‌ ಟವರ್‌ ಬಳಿ ಕರ್ನಾಟಕ ಮುಸ್ಲಿಂ ಜಮಾಹತ್‌, ಎಸ್‌ ಎಸ್‌ ಎಫ್‌ ಮತ್ತು ಎಸ್‌ ವೈ ಎಸ್‌ ಆಯೋಜಿಸಿದ್ದ ಈ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಕತ್ತಿಯೇಟು ಬಿದ್ದಿರುವುದು ಜಲೀಲ್‌ ಗೆ ಮಾತ್ರವಲ್ಲ ಈ ನಾಡಿನ ಕಾನೂನು ವ್ಯವಸ್ಥೆ, ಪೊಲೀಸರ ತಾಕತ್ತಿನ ಮೇಲೆ ಎಂಬ ಘೋಷಣೆಯೊಂದಿಗೆ ಹಪ್ತಾ ರಾಜಕಾರಣದ ವಿರುದ್ಧ ಸೇರಿದ್ದ ಜನ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ನಾವೂರು ಯಾಕೂಲ್‌ ಸಹದಿ ಮುಸ್ಲಿಂ ಸಮುದಾಯದ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿದ್ದರೂ ಯಾರೂ ಕೇಳುವವರು ಇಲ್ಲದಂತಾಗಿದೆ ಮುಖ್ಯ ಮಂತ್ರಿಗಳ ಕ್ರೀಯೆಗೆ ತಕ್‌ ಪ್ರತಿಕ್ರಿಯೆ ಹೇಳಿಕೆಯಿಂದಾಗಿ ಜಿಲ್ಲೆಗೆ ಬೆಂಕಿ ಬಿದ್ದಂತಾಗಿದೆ. ಸರಣಿ ಕೊಲೆಗಳಿಗೆ ಮುಖ್ಯ ಮಂತ್ರಿಗಳ ಈ ಹೇಳಿಕೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಲೀಲ್‌ ಹತ್ಯೆಯಾದ ದಿನ ಮುಖ್ಯಮಂತ್ರಿ ದ.ಕ ಜಿಲ್ಲಾ ಪ್ರವಾಸದಲ್ಲಿದ್ದರೂ ಕನಿಷ್ಠ ಸಾಂತ್ವಾನ ಹೇಲದಿರುವುದು ರಾಜಧರ್ಮಕ್ಕೆ ಮಾಡಿದ ದ್ರೋಹ ಎಂದು ಸಿದ್ದಿಕ್‌ ಮೊಂಟುಗೋಳಿ ಹೇಳಿದರು.

ಸಭೆಯಲ್ಲಿ ಹಲವು ಪಕ್ಷದ ಮುಸ್ಲಿಂ ಮುಖಂಡರು, ಸಾಮಾನ್ಯ ಕಾರ್ಯಕರ್ತರಂತೆ ಭಾಗವಹಿಸಿದ್ದ್ರರು.

LEAVE A REPLY

Please enter your comment!
Please enter your name here