ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂ ಝಂ ಜ್ಯುವೆಲ್ಲರಿಯಲ್ಲಿ ಗ್ರಾಹಕರ ಮಾಸಿಕ ಉಳಿತಾಯ ಯೋಜನೆಯ ಡ್ರಾ ಕಾರ್ಯಕ್ರಮ ನಡೆಯಿತು. ಫಾತಿಮತ್ ಅಝ್ವೀನಾ ಸರ್ವೆರವರು ಬಂಪರ್ ಬಹುಮಾನ ವಿಜೇತರಾದರು.
ಡ್ರಾದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಹಕರ ಪೈಕಿ ಐವರು ಗ್ರಾಹಕರು ಲಕ್ಕಿ ಡ್ರಾದ ಮೂಲಕ ಆಕರ್ಷಕ ಬಹುಮಾನವನ್ನು ಪಡೆದುಕೊಂಡರು. ಮಾಸಿಕ ಕನಿಷ್ಟ ಐನೂರು ರೂಪಾಯಿಯಿಂದ ಆರಂಭವಾಗುವ ಈ ಸ್ಕೀಂಗೆ ಒಂದು ವರ್ಷದ ವರೆಗೆ ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗಿದೆ.
ಈ ಸಂದರ್ಭದಲ್ಲಿ ಸಾಲ್ಮರ ಮೌಂಟನ್ ವ್ಯೂ ಶಾಲಾ ಸಂಚಾಲಕರಾದ ಮುಹಮ್ಮದ್ ಸಾಬ್ ಕೂರ್ನಡ್ಕ, ಡಿಎ ಬುರ್ಕಾ ಪ್ಯಾಲೇಸ್ ಮಾಲಕ ದಾವುದ್ ಬಪ್ಪಳಿಗೆ, ಟೋಪ್ಕೊ ಗ್ರೂಪ್ ನ ಮಾಲಕರಾದ ಮುಹಮ್ಮದ್ ಕುಂಞ ಟಿ.ಕೆ., ಗ್ರಾಹಕರಾದ ಯೂಸುಫ್ ಮೈದಾನಿಮೂಲೆ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಅಝೀಝ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.