








ಪುತ್ತೂರು: ಬಿಳಿಯೂರು ಗ್ರಾಮದ ಕರುವೇಲು ಸಮೀಪದ ಪಲಿಕೆ ನಿವಾಸಿ, ಕರುವೇಲು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದ ತಾರನಾಥ(65ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ದ.30ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪೂಜಾರಿಪಾಲು ಕಲ್ಕುಡ ಕಲ್ಲುರ್ಟಿ ಗ್ರಾಮ ದೈವಸ್ಥಾನದ ಅಧ್ಯಕ್ಷರೂ ಆಗಿದ್ದ ತಾರನಾಥ ಅವರು ಪತ್ನಿ ಜಯಂತಿ ಮತ್ತು ಪುತ್ರ ನಿಹಾಲ್ ಅವರನ್ನು ಅಗಲಿದ್ದಾರೆ. ದ.31ರಂದು ಬೆಳಿಗ್ಗೆ ಮಂಗಳೂರಿನಿಂದ ತಾರನಾಥ ಪಲಿಕೆ ಅವರ ಮೃತದೇಹವನ್ನು ಕರುವೇಲು ಭಜನಾ ಮಂದಿರಕ್ಕೆ ತಂದು ಅಲ್ಲಿಂದ ಮೆರವಣಿಗೆ ಮೂಲಕ ಅವರ ಮನೆಗೆ ಕೊಂಡೊಯ್ಯಲಾಗುವುದು ಎಂದು ಭಜನಾ ಮಂದಿರದ ಪ್ರಕಟಣೆ ತಿಳಿಸಿದೆ.














