ಪುತ್ತೂರು: ತಮ್ಮ ವೈವಿಧ್ಯಮಯ ಪದ್ಯ ಮತ್ತು ಗದ್ಯ ಕೃತಿಗಳಿಂದಾಗಿ ಹೆಸರು ಪಡೆದ ‘ಸುದ್ದಿ ಬಿಡುಗಡೆ’ಯ ಹಿರಿಯ ಅಂಕಣಕಾರ ಪ್ರೊ| ವಿ.ಬಿ.ಅರ್ತಿಕಜೆಯವರ ಬೃಹತ್ ಗ್ರಂಥ ‘ಸಾವಿರದ ಕಥೆಗಳು’ 2022ರ ಕೊನೆಯ ದಿನದಂದು ಕಾಸರಗೋಡು ಜಿಲ್ಲೆಯ ನಾರಾಯಣಮಂಗಲದಲ್ಲಿ ಬಿಡುಗಡೆಗೊಂಡಿದೆ.
ಹಿರಿಯ ಕವಿ ಮತ್ತು ಸಾಹಿತ್ಯ ಪ್ರಚಾರಕ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್‌ರವರು ಕೃತಿಯನ್ನು ಓದುಗರಿಗೆ ಸಮರ್ಪಿಸಿ ಮಾತನಾಡಿ, ಒಂದು ಸಾವಿರ ಪುಟಗಳಲ್ಲಿ ಒಂದು ಸಾವಿರದ ಒಂದು ಕಥೆಗಳನ್ನು ಒಳಗೊಂಡಿರುವ ಈ ಪುಸ್ತಕವು ಎಳೆಯರಿಗೆ, ಅಧ್ಯಾಪಕರಿಗೆ, ಪ್ರವಚನಕಾರರಿಗೆ, ಹರಿಕಥೆದಾಸರಿಗೆ, ಲೇಖಕರಿಗೆ ಮತ್ತು ವಿದ್ವತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲಾ ವಯೋ ಮಾನದ ಚಿಂತಕರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು. ಲೇಖಕ ಪ್ರೊ| ವಿ.ಬಿ ಅರ್ತಿಕಜೆ ಅವರು ಸ್ವಾಗತಿಸಿ, ವಂದಿಸಿದರು. ಆಸಕ್ತರು ಜ್ಞಾನಗಂಗಾದ ಪ್ರಕಾಶ್ ಕುಮಾರ್ ಅವರನ್ನು ಸಂಪರ್ಕಿಸುವಂತೆ ಅರ್ತಿಕಜೆ ಅವರು ಹೇಳಿದರು.