ಜ.7, 8: ಪುತ್ತೂರಿನ ಸಸ್ಯ ಜಾತ್ರೆಗೆ ಬನ್ನಿ…  ಕೃಷಿಕರಿಗೆ ಸ್ವಾತಂತ್ರ್ಯ ಘೋಷಣೆ ಬೆಂಬಲಿಸಿ

0

ಲಂಚ, ಭ್ರಷ್ಟಾಚಾರ ರಹಿತ ಕೃಷಿಕರ ಸ್ವಾಭಿಮಾನದ ಬದುಕಿಗೆ ಕೈ ಜೋಡಿಸಿ

ಸುದ್ದಿ ಮಾಹಿತಿ ಟ್ರಸ್ಟ್‌ನ ಕೃಷಿ ಸೇವೆಗೆ ಸ್ಪೋನ್ಸರ್ ನೀಡಿ ಯಶಸ್ವಿಗೊಳಿಸಿ

ಕಳೆದ ಒಂದು ವರ್ಷದಿಂದ ಸುದ್ದಿ ಮಾಹಿತಿ ಟ್ರಸ್ಟ್‌ನ ಸುದ್ದಿ ಕೃಷಿ ಮಾಹಿತಿ ಸೇವಾ ಕೇಂದ್ರ ಕೃಷಿಕರಿಗೆ ಮಾಹಿತಿ, ತರಬೇತಿ ಕೃಷಿಕರನ್ನು ಗುರುತಿಸುವ ಕಾರ್ಯದೊಂದಿಗೆ ಮಾರುಕಟ್ಟೆಗೆ ಸಹಾಯ ಮಾಡುತ್ತಿದೆ. ಪುತ್ತೂರಿನಲ್ಲಿ ಜ.7 ಹಾಗೂ 8ರಂದು ನಡೆಯುವ ಸಸ್ಯ ಜಾತ್ರೆ ಕೃಷಿಕರ ಮನೆ ಬಾಗಿಲಿಗೆ ಸೇವೆ, ಸಂಪೂರ್ಣ ಮಾಹಿತಿ, ಮಾರುಕಟ್ಟೆ ಖರೀದಿ ವ್ಯವಸ್ಥೆಯೊಂದಿಗೆ ಸ್ವಾಭಿಮಾನದ ಸ್ವತಂತ್ರ ಬದುಕಿಗೆ ದಾರಿ ದೀಪದ ಕೆಲಸ ಮಾಡಲಿದೆ. ಕೃಷಿಯ ಮೇಳದೊಂದಿಗೆ ಅಲ್ಲಿ ಟೆರೇಸ್ ಗಾರ್ಡನ್, ಹೂವಿನ, ತರಕಾರಿ ಗಿಡ, ಔಷಧೀಯ ಗಿಡಗಳು, ಮೀನುಗಾರಿಕೆ, ಅಡಿಕೆ ಖಾಯಿಲೆಗಳ ತಡೆ, ಪರ್ಯಾಯ ಬೆಳೆಗಳು, ಹಣ್ಣಿನ ಗಿಡಗಳು, ಜೇನು ಕೃಷಿ, ಅಕ್ವೇರಿಯಂ, ಕೃಷಿ ಮೌಲ್ಯವರ್ಧನೆಯ ಬಗ್ಗೆ ತಜ್ಞರು ವಿಚಾರ ಸಂಕಿರಣ ನಡೆಸಲಿದ್ದಾರೆ. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕೃಷಿಯನ್ನು ಗುರುತಿಸುವ ಬಗ್ಗೆ ವಿವಿಧ ಸ್ಪರ್ಧೆಗಳಿವೆ.

ಒಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ ಕನಿಷ್ಟ ಸಣ್ಣ ಮಟ್ಟಿನ ಕೈ ತೋಟವಾಗಬೇಕು. ಹಣ್ಣು, ಹೂವಿನ, ತರಕಾರಿ ಗಿಡಗಳು ಇರಬೇಕು. ಕಣ್ಣಿಗೆ ಆನಂದ ಕೊಡುವುದು ಅಲ್ಲದೆ ಆಕ್ಸಿಜನ್ ಮತ್ತು ಆರೋಗ್ಯ ನೀಡುವ ವಾತಾವರಣ ಮನೆ ಮನೆಯಲ್ಲಿ ಇರಬೇಕು. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಕೃಷಿಯ ಕಡೆ ಆಸಕ್ತಿ ಹುಟ್ಟಬೇಕು. ಸ್ವಾಭಿಮಾನ, ಗೌರವ ಮತ್ತು ಸಂಪತ್ತು ಪ್ರಾಪ್ತಿಯಾಗಬೇಕು ಎಂಬುವುದೇ ನಮ್ಮ ಆಶಯವಾಗಿದೆ. ಈ ಕೃಷಿ ಆಂದೋಲನ ಯಶಸ್ವಿಯಾಗಲು ಬನ್ನಿ, ಭಾಗವಹಿಸಿ ಆರ್ಥಿಕ ಸ್ಪೋನ್ಸರ್‌ಶಿಪ್ ನೀಡಿ ಪ್ರೋತ್ಸಾಹಿಸಿ.

LEAVE A REPLY

Please enter your comment!
Please enter your name here