ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿ ಪೂರ್ವಭಾವಿ ಸಭೆ

0

ಸರ್ಕಾರದ ಅನುದಾನ ಲಭಿಸುವಂತೆ ಜಿಲ್ಲಾ ಸಂಘ ಮುತುವರ್ಜಿ ವಹಿಸಬೇಕು-ಅಶೋಕ್ ಕುಮಾರ್ ರೈ

ಮಾ. 11, 12ಕ್ಕೆ ಕಂಬಳ, ಜ. 7ಕ್ಕೆ ಕರೆ ಮುಹೂರ್ತ

ಉಪ್ಪಿನಂಗಡಿ: ಇಲ್ಲಿನ ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ದಡದಲ್ಲಿ ವರ್ಷಂಪ್ರತಿ ನಡೆಯುವ ವಿಜಯ-ವಿಕ್ರಮ ಜೋಡುಕರೆ ಕಂಬಳ ಮಾ. 11 ಮತ್ತು 12ರಂದು ನಡೆಯಲಿದ್ದು, ಇದರ ಸಲುವಾಗಿ ಕರೆ ಮುಹೂರ್ತ ಜ. 7ರಂದು ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.

ಅವರು ಜ. 1ರಂದು ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ ವಿಜಯ-ವಿಕ್ರಮ ಕಂಬಳ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಂಬಳ ಈ ಹಿಂದಿಗಿಂತಲೂ ಹೆಚ್ಚಿನ ವೈಭವಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದರು.

ಅನುದಾನ ಲಭಿಸುವಂತೆ ಜಿಲ್ಲಾ ಸಂಘ ಮುತುವರ್ಜಿ ವಹಿಸಬೇಕು: ಸರ್ಕಾರ ಕಂಬಳಕ್ಕಾಗಿ ಕಳೆದ ವರ್ಷ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಜಿಲ್ಲೆಯಲ್ಲಿರುವ 18 ಕಂಬಳ ಕೂಟದ ಪೈಕಿ ಮೂಡಬಿದಿರೆ ಮತ್ತು ಕಾರ್ಕಳಕ್ಕೆ ತಲಾ 10 ಲಕ್ಷ ರೂಪಾಯಿ ಲಭಿಸಿದೆ. ಆದರೆ ಉಳಿದ ಕಂಬಳಕ್ಕೆ ಇದು ದೊರೆತಿಲ್ಲ. ಸರ್ಕಾರಕ್ಕೆ ದ.ಕ. ಜಿಲ್ಲಾಧಿಕಾರಿಯಿಂದ ಶಿಫಾರಸ್ಸು ಹೋಗಿದೆ, ಆದರೆ ಜಿಲ್ಲಾ ಸಂಘ ಅದನ್ನು ದೊರಕಿಸಿಕೊಡುವಲ್ಲಿ ಫಲಪ್ರದವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಶೋಕ್ ಕುಮಾರ್ ರೈಯವರು ಈ ನಿಟ್ಟಿನಲ್ಲಿ ಎಲ್ಲಾ ಕಂಬಳ ಸಮಿತಿಗೂ ಈ ಅನುದಾನ ದೊರಕಿಸಿಕೊಡುವಲ್ಲಿ ಜಿಲ್ಲಾ ಸಂಘ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಈ ಹಿಂದಿನ ಕಂಬಳದಲ್ಲಿ ಉಪ ಸಮಿತಿಯಲ್ಲಿ ಸಮಿತಿ ಸದಸ್ಯರುಗಳಿಗೆ ನೀಡಲಾಗಿದ್ದ ಜವಾಬ್ದಾರಿಯನ್ನು ಓದಿ ಹೇಳಲಾಗಿ ಕಂಬಳ ಯಶಸ್ವಿಗೆ ಶ್ರಮ ವಹಿಸುವಂತೆ ಕೋರಲಾಯಿತು.

ಸಭೆಯಲ್ಲಿ ಡಾ. ರಾಜಾರಾಮ್ ಮಾತನಾಡಿ. ಸಹಕಾರ ನೀಡುವುದಾಗಿ ಹೇಳಿದರು. ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ‍್ಯಾಧ್ಯಕ್ಷ ಅಶೋಕ್ ಕುಮಾರ್ ಅರ್ಪಿಣಿಗುತ್ತು, ಕಾರ‍್ಯದರ್ಶಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಮಾತನಾಡಿ ಸಲಹೆ ಸೂಚನೆ ನೀಡಿದರು.

ಕಂಬಳ ಸಮಿತಿ ಪದಾಧಿಕಾರಿಗಳಾದ ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ಯೋಗೀಶ್ ಸಾಮಾನಿ ಮಠಂತಬೆಟ್ಟು, ವಿಶ್ವನಾಥ ಶೆಟ್ಟಿ ಕಂಗ್ವೆ, ಜಯಪ್ರಕಾಶ್ ಬದಿನಾರು, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಮಡಿವಾಳ, ಕೃಷ್ಣಪ್ರಸಾದ ಬೊಳ್ಳಾವು, ವಿಜಯಕುಮಾರ್ ಪೂಜಾರಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಶಿವರಾಮ ಶೆಟ್ಟಿ ಗೋಳತಮಜಲು, ಮಹಾಲಿಂಗ ನಾಯ್ಕ್ ಕಜೆಕ್ಕಾರು, ಕಬೀರ್ ಕರ್ವೇಲು, ವಾರಿಸೇನ ಜೈನ್, ಜಯಾನಂದ ಪಿಲಿಗುಂಡ, ಧರ್ನಪ್ಪ ನಾಯ್ಕ್, ಜಯರಾಮ ಶೆಟ್ಟಿ ಕಲ್ಯಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here