ಪುತ್ತೂರು : ಸಾಮೆತ್ತಡ್ಕ ಹಿ.ಪ್ರಾ.ಶಾಲಾ ವಾರ್ಷಿಕೋತ್ಸವ ಡಿ.31ರಂದು ನಡೆಯಿತು. ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್‌ರವರು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ನಗರಸಭಾಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಿ ಮಾತನಾಡಿ, ಈ ಶಾಲೆಯಲ್ಲಿ ೧೮ರ ಸಂಖ್ಯೆಗಿಳಿದ ಮಕ್ಕಳ ಹಾಜರಾತಿಯನ್ನು ಮತ್ತೆ ೧೨೦ಕ್ಕೇ ಏರಿಕೆ ಮಾಡಿರುವಂತ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಶೌಚಾಲಯ, ಮುಖ್ಯರಸ್ತೆಯಿಂದ ಶಾಲೆಯ ಸಂಪರ್ಕ ರಸ್ತೆಯ ಡಾಮರೀಕರಣ ಹಾಗೂ ಪಕ್ಕದಲ್ಲೇ ಇರುವ ಉದ್ಯಾನಕ್ಕೆ ಪುಟಾಣಿ ಮಕ್ಕಳ ಮನೋರಂಜನೆಗಾಗಿ ಆಟಿಕೆ ಜೋಡಣೆಯ ಕಾರ್ಯಕ್ಕೆ ಅನುದಾನ ಕಾಯ್ದಿರಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಸರಕಾರಿ ಶಾಲೆಯೂ ಉತ್ತಮ ಮಟ್ಟ ತಲುಪಬೇಕೆಂದು ತಮ್ಮ ಆಶಯ ವ್ಯಕ್ತಪಡಿಸಿದರು.
ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ ಮಾತನಾಡಿ ವಾರ್ಷಿಕೋತ್ಸವವೆಂಬುದು ಮಕ್ಕಳ ಪ್ರತಿಭೆ ಹಾಗೂ ಕೌಶಲ್ಯವನ್ನೂ ಪ್ರದರ್ಶಿಸಲು ಒಂದು ವೇದಿಕೆ. ಏಷ್ಟೇ ಉನ್ನತ ಹುದ್ದೆ, ಪದವಿ ಸ್ವೀಕರಿಸಿದರೂ ಅಕ್ಷರ ಕಲಿತ ದೇಗುಲವನ್ನು ಮರೆಯಬಾರದೆಂದು ಕಿವಿಮಾತು ಹೇಳಿದರು. ರಾಜ್ಯ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಮಾತನಾಡಿ, ಶಾಲೆಯ ಬೆಳವಣಿಗೆಗೆ ಮುಖ್ಯವಾಗಿ ಕಾರಣಕರ್ತರು ಪೋಷಕರು. ಸರ್ಕಾರಿ ಶಾಲೆಯನ್ನೂ ಕೂಡ ದತ್ತು ಪಡೆದು ಮುನ್ನಡೆಸಿಕೊಂಡು ಹೋಗುವುದು ನಿಜವಾಗಲೂ ತುಂಬಾನೇ ಬೇಸರ ದುಃಖದ ಸಂಗತಿ ಎಂದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಈ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಭಟ್ರು , ಜೊತೆಗಿರುವ ದಿನೇಶ್ ಕಾಮತ್ ರವರ ತಂಡ , ೧೦ ಮಕ್ಕಳಿಂದ ೧೨೦ ಮಕ್ಕಳಿಗೆ ಜಂಪ್ ಮಾಡಿರುವ ಅವಿರತ ಶ್ರಮ ಮೆಚ್ಚುವಂತದ್ದು ಅತೀಯಾದ ಇಂಗ್ಲೀಷ್ ವ್ಯಾಮೋಹ ಹಾಗೂ ಮಾತೃ ಭಾಷೆಯ ಬಗ್ಗೆ ಕೀಳರಿಮೆಯೆ ವಿದ್ಯಾ ದೇಗುಲಗಳ ಅವನತಿಗೆ ಕಾರಣ. ಮುಚ್ಚಿ ಹೋಗುವಂತಹ ಶಾಲೆಯನ್ನು ಮುನ್ನಡೆಸಿ ಯಶಸ್ಸು ದಕ್ಕಿದೆ ,ಇನ್ನೂ ಈ ಜಯ ಮುಂದುವರಿಯಲಿ ಎಂದು ಹರಸಿದರು.
ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ , ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ , ಶಾಲೆಯ ಮೊದಲ ವಿದ್ಯಾರ್ಥಿ ಡಾ. ಶ್ರೀದೇವಿ ಸಂದರ್ಭೋಚಿತವಾಗಿ ಮಾತನಾಡಿದರು.ಉದ್ಯಮಿ ಪ್ರಸನ್ನ ಶೆಟ್ಟಿ ಸಿಝ್ಲರ್, ರೋಶನ್ ರೆಬೆಲ್ಲೋ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಡಿಎಂಸಿ ಅಧ್ಯಕ್ಷ ಪ್ರಸಾದ್ , ನಿಕಟಪೂರ್ವಾಧ್ಯಕ್ಷ ಪಂಚಾಕ್ಷರಿ , ಎಸ್ಡಿಎಂಸಿ ಉಪಾಧ್ಯಕ್ಷೆ ಪವಿತ್ರ , ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಕಾಮತ್ , ನಮ್ಮ ಶಾಲೆ ಸಾಮೆತ್ತಡ್ಕ ಟ್ರಸ್ಟ್ ಕಾರ್ಯದರ್ಶಿ ಇಂದುವರ್ ಭಟ್ , ಸಾಮೆತ್ತಡ್ಕ ಯುವಕ ಮಂಡಲ ಇದರ ಜೊತೆ ಕಾರ್ಯದರ್ಶಿ ಸಿರಾಜ್ ,ಮೀನಾಕ್ಷಿ ,ವೇದ , ತೇಜಸ್ವಿ , ಲಿಖಿತಾ , ಪುಷ್ಪ , ಮಹಮ್ಮದ್ ಫಾಹಿಝ್ , ಶಾಲಾ ಪ್ರಭಾರ ಮುಖ್ಯಗುರು ಮರಿಯಾರವರು ಅತಿಥಿಗಳಿಗೆ ಹೂ, ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಭಾರ ಮುಖ್ಯ ಗುರು ಮರಿಯ ಪ್ರಸ್ತಾವನೆಗೈದರು. ಆ ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನಗಳನ್ನು ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು. ಹಿರಿಯ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಾಯಕಿ ರಮ್ಯ , ವಿದ್ಯಾರ್ಥಿಗಳು , ಶಾಲಾ ಅಭಿವೃಧ್ಧಿ ಸಮಿತಿ ಪದಾಧಿಕಾರಿಗಳು ,ನಮ್ಮ ಶಾಲೆ ಸಾಮೆತ್ತಡ್ಕ ಇದರ ಟ್ರಸ್ಟಿಗಳು, ಸಾಮೆತ್ತಡ್ಕ ಯುವಕ ಮಂಡಲದ ಪದಾಧಿಕಾರಿಗಳು ,ಅಕ್ಷರ ದಾಸೋಹ ಸಿಬಂದಿಗಳು ಮತ್ತು ಶಾಲೆಯ ಹಳೇ ವಿಧ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ತದನಂತರ ಭೋಜನ ಬಳಿಕ ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಂದ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ ನಡೆಯಿತು.