Saturday, February 4, 2023
Homeಚಿತ್ರ ವರದಿತಾ|ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘದಿಂದ ಗ್ರೀಷ್ಮ ಇಲೆಕ್ಟ್ರಿಕಲ್ಸ್ ನ ಜಗದೀಶ್ ಗೌಡರವರ ಚಿಕಿತ್ಸಾ ವೆಚ್ಚಕ್ಕೆ...

ತಾ|ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘದಿಂದ ಗ್ರೀಷ್ಮ ಇಲೆಕ್ಟ್ರಿಕಲ್ಸ್ ನ ಜಗದೀಶ್ ಗೌಡರವರ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ

ಪುತ್ತೂರು: ವಿದ್ಯುತ್ ಕೆಲಸ ಮಾಡುವ ಸಂದರ್ಭದಲ್ಲಿ ಏಣಿಯಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘದ ಸದಸ್ಯರಾಗಿರುವ ಗ್ರೀಷ್ಮ ಇಲೆಕ್ಟ್ರಿಕಲ್ಸ್ ನ ಜಗದೀಶ್ ಗೌಡರವರ ಚಿಕಿತ್ಸಾ ವೆಚ್ಚಕ್ಕೆ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘದಿಂದ ಧ‌ನ ಸಹಾಯ ನೀಡಲಾಯಿತು.


ಪರ್ಪುಂಜದ ಗ್ರೀಷ್ಮ ಇಲೆಕ್ಟ್ರಿಕಲ್ಸ್ ಮಾಲಕ ಜಗದೀಶ್ ಗೌಡರವರು ಇತ್ತೀಚೆಗೆ ವಿದ್ಯುತ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಏಣಿಯಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆಗೆ ರೂ.5 ಲಕ್ಷ ವೆಚ್ಚ ತಗಲುತ್ತದೆ ಎಂದು ಆಸ್ಪತ್ರೆಯ ವೈದ್ಯರು ಸೂಚಿಸಿರುತ್ತಾರೆ

. ಇದನ್ನು ಮನಗಂಡ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘವು ಗಾಯಗೊಂಡ ಜಗದೀಶ್ ಗೌಡರವರ ಚಿಕಿತ್ಸಾ ಪರಿಹಾರಕ್ಕೆ ಈಗಾಗಲೇ ರೂ.1,16,300 ಮೊತ್ತದ ಧನ ಸಂಗ್ರಹ ಒಟ್ಟುಗೂಡಿಸಿದ್ದು ಆ ಪರಿಹಾರ ಮೊತ್ತದೊಂದಿಗೆ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಜಗದೀಶ್ ಗೌಡರ ಮನೆಗೆ ತೆರಳಿ ಜಗದೀಶ್ ಗೌಡರ ಪತ್ನಿ ಹಾಗೂ ಸಹೋದರನಿಗೆ ಹಸ್ತಾಂತರಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಸಂಗ್ರಹವಾಗುವ ಮೊತ್ತವನ್ನು ನೀಡುತ್ತೇವೆ ಎಂದು ಸಂಘವು ಭರವಸೆಯನ್ನು ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘದ ಅಧ್ಯಕ್ಷ ಸೂರ್ಯನಾಥ ಆಳ್ವ, ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ಕೊಳತ್ತಾಯ, ಮಾಜಿ ಅಧ್ಯಕ್ಷ ಮಹಾದೇವ ಶಾಸ್ತ್ರಿ, ಉಪಾಧ್ಯಕ್ಷ ಕೃಷ್ಣಪ್ರಶಾಂತ್, ಕಾರ್ಯದರ್ಶಿ ಅಶೋಕ್, ಕೋಶಾಧಿಕಾರಿ ಸಜೀತ್ ಎಸ್.ಕೆ, ಸಂಘಟನಾ ಕಾರ್ಯದರ್ಶಿ ಮಹಮದ್ ನಿಸಾರ್, ಜೊತೆ ಕಾರ್ಯದರ್ಶಿ ಬಾಬು ನಾಯ್ಕ, ಸದಸ್ಯರಾದ ಕುಶಾಲಪ್ಪ ಗೌಡರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!