Saturday, February 4, 2023

Homeಚಿತ್ರ ವರದಿಉದಯಗಿರಿ ಒತ್ತೆಕೋಲದಲ್ಲಿ ಮೇಲೇರಿಯ ಬೆಂಕಿಯ ಜ್ವಾಲೆಯಲ್ಲಿ ದೈವದ ಸ್ವರೂಪ ಪ್ರತ್ಯಕ್ಷ!

ಉದಯಗಿರಿ ಒತ್ತೆಕೋಲದಲ್ಲಿ ಮೇಲೇರಿಯ ಬೆಂಕಿಯ ಜ್ವಾಲೆಯಲ್ಲಿ ದೈವದ ಸ್ವರೂಪ ಪ್ರತ್ಯಕ್ಷ!

ಪುತ್ತೂರು:ಮುಂಡೂರು ಅಜಲಾಡಿ ಉದಯಗಿರಿಯಲ್ಲಿ ಜ.2ರಂದು ನಡೆದ ಒತ್ತೆಕೋಲದ ಮೇಲೇರಿಗೆ ಹಾಕಿದ ಬೆಂಕಿಯ ಜ್ವಾಲೆಯಲ್ಲಿ, ಕೆಂಡ ಸೇವೆ ಪಡೆಯುವ ವಿಷ್ಣುಮೂರ್ತಿ ದೈವದ ಸ್ವರೂಪ ಗೋಚರಿಸಿರುವ ವಿಸ್ಮಯಕಾರಿ ಘಟನೆ ನಡೆದಿರುವುದಾಗಿ ವರದಿಯಾಗಿದೆ.


ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನವು ಸಮಗ್ರವಾಗಿ ಜೀರ್ಣೋದ್ಧಾರಗೊಂಡು ಎರಡು ದಿನಗಳ ಕಾಲ ಬ್ರಹ್ಮಕಲಶೋತ್ಸವ ನೆರವೇರಿದ ಬಳಿಕ ಜ.2ರಂದು ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆದಿದೆ. ಸಂಜೆ ಮೇಲೇರಿಗೆ ಅಗ್ನಿಸ್ಪರ್ಷ ನಡೆದು ಉರಿಯುವ ಬೆಂಕಿಯ ಜ್ವಾಲೆಯಲ್ಲಿ ದೈವದ ಸ್ವರೂಪವೇ ಗೋಚರಿಸಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಕಿ ಜ್ವಾಲೆಯಲ್ಲಿ ದೈವ ಸ್ವರೂಪ ಗೋಚರಿಸಿರುವುದು ಕ್ಷೇತ್ರದ ದೈವದ ಕಾರಣಿಕ ಶಕ್ತಿಯಾಗಿದೆ ಎನ್ನುತ್ತಾರೆ ಇಲ್ಲಿನ ಭಕ್ತಾದಿಗಳು.

LEAVE A REPLY

Please enter your comment!
Please enter your name here

Must Read

spot_img
error: Content is protected !!