ವಾರ್ಷಿಕ ಕ್ರೀಡೋತ್ಸವ ಉದ್ಘಾಟನಾ ಸಮಾರಂಭವು ಜ.5 ರಂದು ಪಟ್ಟೆ ಶ್ರೀಕಷ್ಣ ಹಿ.ಪ್ರಾ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕ ಶಿವಪ್ರಸಾದ್ ಪಟ್ಟೆ ಕ್ರೀಡಾ ಧಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು.
ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬೀನೋಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು
ಪುತ್ತೂರು, ನಗರ ಠಾಣೆ ಪೋಲಿಸ್ ಅಧಿಕಾರಿ ಪ್ರಶಾಂತ್ ರೈ ಕುದ್ಕಾಡಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಗೊಲ್ಡನ್ ಲೈಫ್ ಈ ದಿಸೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಜೀವನ ರೂಪಿಸುತ್ತಾರೊ ಅದರ ಮೇಲೆ ಜೀವನ ಪದ್ಧತಿ ರೂಪುಗೊಳ್ಳುತ್ತದೆ.ಮುಂದಿನ ಭವಿಷ್ಯದ ನಿರ್ಮಾಣ ನಿಟ್ಟಿನಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ವಿದ್ಯಾಸಂಸ್ಥೆಗೆ ಹಾಗೂ ಹೆತ್ತವರಿಗೆ ಹೆಸರು ತರುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿ ಹರಿಪ್ರಸಾದ್ ರೈ ಸೇನರ ಮಜಲು ಮೈಂದನಡ್ಕ (ಮಸ್ಕತ್ ) ಜ್ಯೋತಿ ಪ್ರಜ್ವಲಿಸಿ ಮಾತನಾಡಿ ಸಂಸ್ಥೆಯು ಶಿಸ್ತು ಮತ್ತು ಪ್ರೋತ್ಸಾಹ ನೀಡಿದೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಎತ್ತರಕ್ಕೆ ಬೆಳೆಯುವಲ್ಲಿ ಸಹಕಾರವಾಗಿದೆ.ಎಂದರು.
ಕುದ್ಮಾರು ಸ ಉ.ಹಿ.ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಎ ಎಂ ಸನ್ಮಾನ ಸ್ವೀಕರಿಸಿ ಮಾತನಾಡಿ ಪಟ್ಟೆ ವಿದ್ಯಾಸಂಸ್ಥೆಗೂ ನನಗೂ ಅವಿನಾಭಾವ ಸಂಬಂಧ ಇದೆ. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕೀರ್ತಿ ಈ ವಿದ್ಯಾಸಂಸ್ಥೆಗಿದೆ. ಮುಂದೆ ಕ್ರೀಡಾ ರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿ ಗುರುವಗೆ ಮೀರಿ ದ ಶಿಕ್ಷಕರಾಗಿ ಬಾಳಿ ಎಂದು ಹೇಳಿ ಶುಭ ಹಾರೈಸಿದರು.
ನೆಲ್ಯಾಡಿ ಸ ಉ.ಹಿ.ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ’ ಮಾತನಾಡಿ ಕ್ರೀಡೆ ಎಲ್ಲರನ್ನೂ ಬೆಸೆಯುವ ಕೂಟ .ಬದುಕಿನಲ್ಲಿ ಜೀವನದ ಟ್ರೇಕ್ ತಪ್ಪಿದಲ್ಲಿ ಅಪಾಯ ಸಂಭವಿಸುತ್ತದೆ ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದ ಉತ್ತಮ ಪ್ರಜೆಗಳಾಗಿ ಜೀವನ ನಡೆಸುವಂತೆ ಕಿವಿಮಾತನಾಡಿದರು.
ಪುತ್ತೂರು ಕ್ಷೇತ್ರ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ ವಿದ್ಯಾಸಂಸ್ಥೆ ಕ್ರೀಡಾ ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದೆ. ಮುಂದೆಯೂ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳನ್ನು ಅನಾವರಣ ಗೊಲಿಸುವಂತಾಗಲಿ ಎಂದು ಹಾರೈಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ ಭಟ್ ಪಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರ ಮಟ್ಟದ ಕ್ರೀಡಾ ಕೂಡಕ್ಕರ ಪೂರಕವಾದ ಕ್ರೀಡಾಂಗಣ ಸಜ್ಜು ಗೊಳಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರತಿ ವರ್ಷ ಸಂಸ್ಥಯು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಗೊಂಡಿದ್ದು ಅಲ್ಲಿಯೂ ವಿಜೇತಳಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುತ್ತಾಳೆ ನಂಬಿಕೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಅಲೆಕ್ಸ್ ಡಿಸೋಜ ಹೊಸನಗರ ಪರಿಗೇರಿ (ದುಬೈ). ವಿದ್ಯಾಸಂಸ್ಥೆಗಳ ನಿರ್ದೇಶಕರಾದ ನಹುಷ ಪಿ.ವಿ,
ಸಿರೀಸ್ ಪಿ.ಬಿ , ಪ್ರತಿಭಾ ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬೆಳಿಯಪ್ಪ ಗೌಡ ಕನ್ನಯ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಯಂಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುಫ್ ಪಿ ಆರ್, ಶ್ರೀ ಕೃಷ್ಣ ಹಿ .ಪ್ರಾ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿಯವರಾದ ಶಂಕರಿ ಪಟ್ಟೆ, ಯಮುನಾ ಪಟ್ಟೆ ಅಂತರಾಷ್ಟ್ರೀಯ ಕ್ರೀಡಾಪಟು ಪೂರ್ಣಿಮಾ ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕ ವೃಂದದವರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀ ಕೃಷ್ಣ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್,ಸ್ವಾಗತಿಸಿದರು, ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ವಂದಿಸಿದರು. ಕುಂಬ್ರ ಸ ಪ ಪೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾ ಸಾಧಕರಿಗೆ ಸನ್ಮಾನ:-
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುದ್ಮಾರು ಸ ಉ.ಹಿ.ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಎ ಎಂ ಹಾಗೂ
ನೆಲ್ಯಾಡಿ ಸ ಉ.ಹಿ.ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ’ ಇವರನ್ನು ಸಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.