Saturday, February 4, 2023
Homeಗ್ರಾಮವಾರು ಸುದ್ದಿಪಾಲಿಂಜೆ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ: ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಕಟ್ಟೆಪೂಜೆ

ಪಾಲಿಂಜೆ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ: ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಕಟ್ಟೆಪೂಜೆ

ಪುತ್ತೂರು:ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಜ.೫ರಂದು ರಾತ್ರಿ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆಯಿತು.ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತತ್ಸವದಲ್ಲಿ ಜ.೬ರಂದು ನಡೆದ ಅರ್ಧ ಏಕಾಹ ಭಜನೆಯು ಬೆಳಿಗ್ಗೆ ೬ ಗಂಟೆಗೆ ಪ್ರಾರಂಭಗೊಂಡಿತು. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಗಣಹೋಮ, ನಾಗಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ಮಹಾವಿಷ್ಣುಮೂರ್ತಿ ದೇವರಿಗೆ ಪವಮಾನಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಚಾಮುಂಡೇಶ್ವರಿ ದೇವಸ್ಥಾನದ ತನಕ ದೇವರ ಪೇಟೆ ಸವಾರಿ, ನಂತರ ದೇವಸ್ಥಾನಕ್ಕೆ ಹಿಂತಿರುಗಿ ದೇವರಿಗೆ ಕಲಶಾಭಿಷೇಕ, ಸಂಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ, ತೀರ್ಥಪ್ರಸಾದ ನಡೆಯಿತು.


ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಶಿವರಾಮ ಆಳ್ವ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ನಾಯ್ಕ, ಸದಸ್ಯರಾದ ಸಂತೋಷ್ ರೈ ಸಂಪ್ಯದಮೂಲೆ, ರೇಖನಾಥ ರೈ ಸಂಪ್ಯದಮೂಲೆ, ರಮೇಶ್ ಅಂಗಿಂತ್ತಾಯ, ವಿಠಲ ಗೌಡ ಪಾಲಿಂಜೆ, ಮಾಲಿನಿ ಹೆಗ್ಡೆ ಪಾಲಿಂಜೆ, ಮಾಜಿ ಅಧ್ಯಕ್ಷ ಜಯರಾಮ ರೈ ನುಳಿಯಾಲು, ಬ್ರಿಜೇಶ್ ರೈ ಸಂಪ್ಯ, ವಿಶ್ವಜಿತ್ ಅಮ್ಮುಂಜೆ, ವಿಶ್ವನಾಥ ನಾಯ್ಕ ಪಾಲಿಂಜೆ, ಉದಯ ಭಟ್, ದಿನೇಶ್ ಗೌಡ ಡೆಮ್ಮಲೆ, ರಾಮಣ್ಣ ನಾಯ್ಕ, ಸತೀಶ್ ಅಮ್ಮುಂಜೆ, ಮೋಹನ ಪಾಟಾಳಿ, ರಿತೇಶ್ ಡೆಮ್ಮಲೆ, ವಿನೀತ್, ಬ್ರಿಜೇಶ್, ಅದಿತ್ ಪಾಲಿಂಜೆ, ಪೂರ್ಣಿಮಾ ಅಮ್ಮುಂಜೆ, ರೇವತಿ ಅಮ್ಮುಂಜೆ, ಯಶೋಧ ಅಮ್ಮುಂಜೆ, ತನಿಯಪ್ಪ ಸಂಪ್ಯದಮೂಲೆ, ಜಯಶಂಕರ ರೈ ಸಂಪ್ಯದಮೂಲೆ, ಜಗನ್ನಾಥ ಶೆಟ್ಟಿ ಸಂಪ್ಯದಮೂಲೆ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!