ಪುತ್ತೂರು: ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಜಿ.ಎಲ್ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ‘ಬಾಯೋ ಅಮ್ಚೆ ಚೇಡು’ ಕೊಂಕಣಿ ಚಲನ ಚಿತ್ರದ ಪ್ರೀಮಿಯರ್ ಶೋ ಮತ್ತು ಶತಸಂಭ್ರಮಕ್ಕೆ ನಿಧಿ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಚಲನ ಚಿತ್ರ ಆರಂಭಕ್ಕೆ ಮೊದಲು ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಅಣ್ಣಾ ವಿನಯಚಂದ್ರ ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬಿಜಿಎಸ್ ಬಿಎಸ್ಎಸ್ ಸಂಘದ ಅಧ್ಯಕ್ಷ ಬಾಲಕೃಷ್ಣ ತೆಂಕಿಲ, ಸುಳ್ಯ ಬಿಆರ್ಎಸ್ಎಸ್ ಸಂಘದ ಅಧ್ಯಕ್ಷ ಹೇಮಂತ್ ಕಂದಡ್ಕ, ವಿಟ್ಲ ಆರ್ಎಸ್ಬಿ ಸಂಘದ ಅಧ್ಯಕ್ಷ ವಾಸುದೇವ ಪ್ರಭು, ವಿರಾಜಪೇಟೆ ಪುದುಪ್ಪಾಡಿ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ರಾಮಕೃಷ್ಣ ಬೋರ್ಕರ್, ಮೋಂತಿಮಾರು ಆರ್ಎಸ್ಬಿ ಸಂಘದ ಅಧ್ಯಕ್ಷ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳ್ತಂಗಡಿ ಆರ್ಎಸ್ಬಿ ಸಂಘದ ಅಧ್ಯಕ್ಷ ಉಮೇಶ್ ಪ್ರಭು, ಕಾಸರಗೋಡು ಆರ್ಎಸ್ಬಿ ಸಂಘದ ಅಧ್ಯಕ್ಷ ಜಯಂತ ನಾಯಕ್ ಕುಂಡೇರಿ, ಬಾಯಾರು ಆರ್ಎಸ್ಬಿ ಸಂಘದ ಅಧ್ಯಕ್ಷ ಮನೋಹರ ನಾಯಕ್, ಜಯಂತ ನಾಯಕ್ ಪೊರೋಳಿ, ಪುತ್ತೂರು ಜಿ.ಎಸ್.ಬಿ ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾಚಂದ್ರಕಾಂತ್ ಭಟ್, ಮಂಗಳೂರು ಸಂಕಲನದ ತರಬೇತುದಾರೆ ವತ್ಸಲ ನಾಯಕ್ ಪುತ್ತೂರು ಶ್ರೀಲಕ್ಷ್ಮೀ ವೆಂಕಟ್ರಮಣ ವೆಂಕಟ್ರಮಣ ದೇವಸ್ಥಾನದ ಮೊಕ್ತೇಸರ ಅಶೋಕ್ ಪ್ರಭು ಸೇರಿದಂತೆ ಸಿನಿ ಪ್ರೇಮಿಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ವಂದಿಸಿ ನಿರ್ದೇಶಕಿ ಮಲ್ಲಿಕಾ ಕುಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.