ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಪುತ್ತೂರಿನ ಲೇಖಕಿ ಜೆಸ್ಸಿ ಪಿ.ವಿ ಭಾಗಿ

1

ಪುತ್ತೂರು: ಜನವರಿ 6, 7 ಹಾಗೂ 8 ರಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪುತ್ತೂರಿನ ಲೇಖಕಿ ಜೆಸ್ಸಿ ಪಿ.ವಿರವರು ಭಾಗವಹಿಸಿರುತ್ತಾರೆ.

8ನೇ ತಾರೀಖು ಸಮ್ಮೇಳನದ ವೇದಿಕೆ 3ರಲ್ಲಿ ಖ್ಯಾತ ಕವಿಗಳಾದ ಡಾ.ಸತೀಶ್ ಕುಲಕರ್ಣಿರವರ ಅಧ್ಯಕ್ಷತೆಯಲ್ಲಿ, ತುಮಕೂರಿನ ಕವಯತ್ರಿಗಳಾದ ಡಾ.ಗೀತ ವಸಂತರವರು ಆಶಯ ನುಡಿಗಳನ್ನಾಡಿರುವ ಈ ಕವಿ ಗೋಷ್ಠಿಯಲ್ಲಿ ಸುಮಾರು 25 ಮಂದಿ ವಿವಿಧ ಕಡೆಗಳಿಂದ ಆಗಮಿಸಿದ ಕವಿಗಳು ಭಾಗವಹಿಸಿದ್ದು ಇದರಲ್ಲಿ ಪುತ್ತೂರಿನ ಸಂಟ್ಯಾರು ನಿವಾಸಿ, ಪ್ರಸ್ತುತ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ಲೇಖಕಿ ಶ್ರೀಮತಿ ಜೆಸ್ಸಿ ಪಿ.ವಿಯವರು ಭಾಗವಹಿಸಿ ಸ್ವರಚಿತ ಕವನ ವಾಚನ ಮಾಡಿರುತ್ತಾರೆ. ಇವರು ಸಂತ ಫಿಲೋಮಿನಾ ಕಾಲೇಜಿನ ಆಡಳಿತ ಸಿಬ್ಬಂದಿಯಾಗಿರುವ ಅರುಣ್ ರೆಬೆಲ್ಲೋರವರ ಪತ್ನಿ.

1 COMMENT

  1. ಶ್ರೀ ಕಲ್ಲೆಶ್ವರ ಭಜನಾ ಸಂಘ ತಾಳಿಕಟ್ಟೆ ಹೊಳಲ್ಕೆರೆ ತಾ ಚಿತ್ರದುರ್ಗ ಜಿ ಕರ್ನಾಟಕ ರಾ

LEAVE A REPLY

Please enter your comment!
Please enter your name here