ಅನಧಿಕೃತ ಬ್ಯಾನರ್, ಕಟೌಟ್ ತೆರವು ಮಾಡಲು ನಗರಸಭೆ ಸೂಚನೆ – ಜ.11ರಿಂದ ತೆರವು ಕಾರ್ಯಾಚರಣೆ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಜಾಹಿರಾತು ಬ್ಯಾನರ್ ಮತ್ತು ಕಟೌಟ್ ಅನಧಿಕೃತವಾಗಿದ್ದಲ್ಲಿ ಅದನ್ನು ತೆರವು ಮಾಡಬೇಕು. ತಪ್ಪಿದಲ್ಲಿ ನಗರಸಭೆ ವತಿಯಿಂದ ತೆರವು ಕಾರ್ಯಾಚರಣೆ ಜ.11 ರಂದು ನಡೆಯಲಿದೆ.

ಈಗಾಗಲೇ ನಗರಸಭೆಯಿಂದ ಅನುಮತಿ ಪಡೆದು ಅಳವಡಿಸಲಾಗಿರುವ ಜಾಹಿರಾತು ಬ್ಯಾನರ್ ಮತ್ತು ಕಟೌಟ್ ಹೊರತು ಪಡಿಸಿ ಅನುಮತಿ ಇಲ್ಲದೆ ಅಳವಡಿಸಿರುವ ಬ್ಯಾನರ್ ಮತ್ತು ಕಟೌಟ್ ಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಅಳವಡಿಸಲು ಅನುಮತಿ ಪಡೆಯಲು ಸಕಾಲ ಸೇವೆಯಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡುವುದು. ತಪ್ಪಿದಲ್ಲಿ ಎಲ್ಲ ವಿಧದ ಅನಧಿಕೃತ ಜಾಹಿರಾತುಗಳನ್ನು ತೆರವುಗೊಳಿ ಅಳವಡಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಜ.11 ರಂದು ಅನಧಿಕೃತ ಜಾಹಿರಾತು ಬ್ಯಾನರ್ ಮತ್ತು ಕಟೌಟ್ ಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here