ಉಕ್ಕುಡ: ಬೈಕ್‌ಗಳ ಮಧ್ಯೆ ಅಪಘಾತ-ಓರ್ವನಿಗೆ ಗಾಯ

0

ವಿಟ್ಲ: ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಒಂದು ಬೈಕಿನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡದಲ್ಲಿ ಜ.10ರಂದು ನಡೆದಿದೆ..


ವಿಟ್ಲ ಕಡೆಯಿಂದ ಕುದ್ದುಪದವು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಕುದ್ದುಪದವು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕ್ ನ ನಡುವೆ ಈ ಅಪಘಾತ ಸಂಭವಿಸಿದೆ.

ಒಂದು ಬೈಕಿನಲ್ಲಿ ಕುದ್ದುಪದವು ಮೂಲದ ವೈದ್ಯರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ಬೈಕಿನಲ್ಲಿದ್ದವರು ಬಳ್ಳೂರು ನಿವಾಸಿಗಳೆಂದು ತಿಳಿದು ಬಂದಿದ್ದು, ಇಬ್ಬರ ಪೈಕಿ ಸಹಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here