ಕಲ್ಲೇಗ:ಬೈಕ್, ಬುಲ್ಲೆಟ್ ಡಿಕ್ಕಿ-ಬೈಕ್ ಸಹಸವಾರನಿಗೆ ಗಾಯ

0

ಪುತ್ತೂರು:ಬೈಕ್ ಮತ್ತು ಬುಲ್ಲೆಟ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನೆಹರುನಗರ ಕಲ್ಲೇಗದಲ್ಲಿ ಜ.11ರ ರಾತ್ರಿ ನಡೆದಿದೆ. ಪುತ್ತೂರಿನಿಂದ ನೆಹರುನಗರ ಕಡೆ ಪ್ರವೀಣ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ನಾಗಭೂಷಣ್ ಎಂಬವರು ಚಲಾಯಿಸುತ್ತಿದ್ದ ಬುಲ್ಲೆಟ್ ನಡುವೆ ಕಲ್ಲೇಗ ಸಮೀಪ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸಹಸವಾರ ಪವನ್ ಎಂಬವರು ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here