10 ದಿನಗಳಲ್ಲಿ 7 ಎನ್‌ಡಿಪಿಎಸ್ ಪ್ರಕರಣ; 1.90 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಶ

0

ಮಂಗಳೂರು:2023 ಹೊಸ ವರ್ಷದ ಆರಂಭದ ಹತ್ತು ದಿನಗಳ ಅವಧಿಯಲ್ಲಿ 7 ಎನ್‌ಡಿಪಿಎಸ್(ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್)ಪ್ರಕರಣಗಳು ಪತ್ತೆಯಾಗಿದ್ದು, 1.90 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 60 ಸಾವಿರ ರೂ. ಮೌಲ್ಯದ ಎಂಡಿಎಂಎ(ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್),90 ಸಾವಿರ ರೂ.ಮೌಲ್ಯದ 4 ಕೆ.ಜಿ.ಗಾಂಜಾ,40 ಸಾವಿರ ರೂ. ಮೌಲ್ಯದ 8 ಗ್ರಾಮ್ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ.

59,59,280 ರೂ.ಮೌಲ್ಯದ ಮಾದಕ ವಸ್ತುಗಳ ವಶ: 2022ರಲ್ಲಿ ಒಟ್ಟು 398 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 511 ಮಂದಿ ಆರೋಪಿಗಳನ್ನು ಬಂಽಸಲಾಗಿದೆ.ಅವರಿಂದ 59,59,280 ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.19,50,160 ರೂ.ಮೌಲ್ಯದ 596 ಗ್ರಾಮ್ 010 ಎಂಎಲ್ ಎಂಡಿಎಂಎ (ಮೀಥೈಲೆನೆಡಿಯಾಕ್ಸಿ ಮೆಥಾಂ-ಫೆಟಮೈನ್), 7 ಸಾವಿರ ರೂ.ಮೌಲ್ಯದ 67 ಗ್ರಾಮ್ ಅಫೀಮ್, 37,68,120 ರೂ.ಮೌಲ್ಯದ 192 ಕೆ.ಜಿ. ಮತ್ತು 48 ಗ್ರಾಮ್ ಗಾಂಜಾ, 2,34,000 ರೂ. ಮೌಲ್ಯದ 57 ಗ್ರಾಮ್ ಮೆಥಾಂಫೆಟಮೈನ್ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here