ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿದಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವು ಜ.14ರಿಂದ ಜ.22ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಆ ಪ್ರಯುಕ್ತ ಜ.14ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯಿತು.
ಬೆಳಗ್ಗಿನಿಂದ ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್‌ನ ಅಂಗವಾಗಿ ಅರ್ಧ ಏಕಾಹ ಭಜನೆ ನಡೆಯಿತು.
ಸಾಯಂಕಾಲ ವಿಟ್ಲದ ಮೇಗಿನಪೇಟೆಯಲ್ಲಿರುವ ಚಂದ್ರನಾಥ ಬಸದಿಯಿಂದ ಕ್ಷೇತ್ರದ ವರೆಗೆ ಹಸಿರುವಾಣಿ ಮೆರವಣೆಗೆ ಹಾಗೂ ಭಜನಾ ಹುಲ್ಪೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.