ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವ ಹಿನ್ನಲೆ; ಒಕ್ಕಲಿಗ ಸ್ವಸಹಾಯ ಸಂಘದ 5ಸಾವಿರ ಮಹಿಳೆಯರಿಗೆ ಸೀರೆ – ಶ್ರೀಗಳಿಂದ ಸಾಂಕೇತಿಕ ಬಿಡುಗಡೆ

0

ಪುತ್ತೂರು: ಜ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜಯಂತ್ಯೋತ್ಸವದಲ್ಲಿ ಒಕ್ಕಲಿಗ ಸ್ವಸಹಾಯ ಸಂಘದ 7 ವಲಯದ ಮಹಿಳೆಯರು 7 ಬಣ್ಣದ ಸೀರೆಯೊಂದಿಗೆ ಪಾಲ್ಗೊಳ್ಳಲಿದ್ದಾರೆ. ಜ.17ರಂದು ಆದಿ ಚುಂಚನಗಿರಿ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಸೀರೆಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದರು.

8ಸಾವಿರಕ್ಕು ಮಿಕ್ಕಿ ಸದಸ್ಯರಿರುವ ಒಕ್ಕಲಿಗ ಸ್ವಸಹಾಯ ಸಂಘದಲ್ಲಿ 5 ಸಾವಿರ ಮಹಿಳೆಯರಿದ್ದು, ಅವರಿಗೆ ಒಕ್ಕಲಿಗ ಸ್ವ ಸಹಾಯ ಸಂಘದ ಟ್ರಸ್ಟ್‌ನಿಂದ ಸೀರೆ ವಿತರಣೆ ನಡೆಯಲಿದೆ. ಸೀರೆಯನ್ನು ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಸಾಂಕೇತಿಕವಾಗಿ ಸದಸ್ಯರಿಗೆ ವಿತರಣೆ ಮಾಡುವ ಮೂಲಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಜಯಂತ್ಯೋತ್ಸವ ಜಿಲ್ಲಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ದಿನೇಶ್ ಮೆದು, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ಅಧ್ಯಕ್ಷ ಮನೋಹರ್ ಡಿ.ವಿ. ಜಯಂತ್ಯೋತ್ಸವ ಸಮಿತಿಯ ತಾಲೂಕು ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಆರ್ಥಿಕ ಸಮಿತಿಯ ಯು.ಪಿ.ರಾಮಕೃಷ್ಣ, ಅಮರನಾಥ್ ಬಪ್ಪಳಿಗೆ, ಗೌರಿ ಬನ್ನೂರು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ರಾಧಾಕೃಷ್ಣ ಗೌಡ ನಂದಿಲ, ರಾಧಾಕೃಷ್ಣ ಗೌಡ ಬನ್ನೂರು, ವೆಂಕಪ್ಪ ಗೌಡ, ಲಿಂಗಪ್ಪ ಗೌಡ ತೆಂಕಿಲ, ಕಿಶೋರ್ ಬೇರಿಕೆ, ರವಿ ಮುಂಗ್ಲಿಮನೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಮೇಲ್ವಿಚಾರಕರಾದ ಸುಮಲತಾ, ವಿಜಯಕುಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸುಮಾರು 8ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಒಳಗೊಂಡಿರುವ ಒಕ್ಕಲಿಗ ಸ್ವಸಹಾಯ ಸಂಘದಲ್ಲಿ ಸುಮಾರು 5ಸಾವಿರ ಮಹಿಳೆಯರಿದ್ದು, 7 ವಲಯಗಳಿವೆ. ಪ್ರತಿಯೊಂದು ವಲಯಕ್ಕೂ ಒಂದೊಂದು ಬಣ್ಣದ ಸೀರೆಯನ್ನು ನೀಡಲಾಗುವುದು. ಅವರೆಲ್ಲ ಜಯಂತ್ಯೋತ್ಸವ ಮೆರವಣಿಗೆಯಲ್ಲಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here