ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ರಾಜೇಶ್ ಮಯೂರ ಜಿಲ್ಲಾ ಯುವ ಪ್ರಶಸ್ತಿಗೆ ಆಯ್ಕೆ

0

ಪುತ್ತೂರು: ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ಜಿಲ್ಲಾ ಯುವ ಪ್ರಶಸ್ತಿಗೆ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ತಾಲೂಕು ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಮಯೂರ ಗೋಳ್ತಿಲರವರು ಆಯ್ಕೆಯಾಗಿದ್ದಾರೆ.

ಚಿತ್ರ: ರಾಜೇಶ್ ಮಯೂರ

ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ವತಿಯಿಂದ ವ್ಯವಸ್ಥಾಪನಾ ಸಮಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇದರ ಸಹಕಾರದೊಂದಿಗೆ ಜ.18 ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದಲ್ಲಿ ನಡೆಯುವ ಯುವ ಸಮ್ಮೇಳನ ಮತ್ತು ತರಬೇತಿ ಕಾರ್ಯಾಗಾರ ಹಾಗೂ ರಾಜ್ಯ, ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿಯಾದ ರಾಜೇಶ್ ಕೆ ಮಯೂರರವರು ದಿ. ಕೊರಗಪ್ಪ ರೈ ಮತ್ತು ಶ್ಯಾಮಲರವರ ಪುತ್ರರಾಗಿದ್ದಾರೆ. 10 ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಇವರು ಪ್ರಾರಂಭ ದಿನದಲ್ಲಿ ಕೂಲಿ ಕೆಲಸ ಬಳಿಕ ಡ್ರಾಯಿಂಗ್ ನಲ್ಲಿ ಒಲವು ಇದ್ದ ಕಾರಣ ಬ್ಯಾನರ್ ಬೋರ್ಡ್ ಬರೆಯುವ ಮೂಲಕ ಚಿರಪರಿಚಿತರಾಗಿದ್ದರು.ಪತ್ನಿ ಜಯಲಕ್ಷ್ಮಿ ಹಾಗೂ ಓರ್ವ ಪುತ್ರಿ ಮತ್ತು ಪುತ್ರನನ್ನು ಹೊಂದಿದ್ದಾರೆ. ತನ್ನ ದೇಹವನ್ನು ಮರಣದ ನಂತರ ಕೆ.ಎಸ್.ಹೆಗ್ಡೆ ದೇರಲಕಟ್ಟೆ ಇಲ್ಲಿಗೆ ದಾನ ಮಾಡಿದ್ದು ಪತ್ನಿ ಜಯಲಕ್ಷ್ಮಿಯವರು ತನ್ನ ಕಣ್ಣುಗಳನ್ನು ದಾನ ಮಾಡಿರುತ್ತಾರೆ.

ಬಡ ಮಕ್ಕಳಿಗೆ ಪ್ರತಿ ವರ್ಷ ಪುಸ್ತಕ ವಿತರಣೆ, ಧನ ಸಹಾಯ, ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಯುವ ಪ್ರಶಸ್ತಿ ಮತ್ತು ಪ್ರೋತ್ಸಾಹ ಧನ ಕೊಟ್ಟು ಗೌರವಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತೇಜನ ನೀಡುವ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಧಾರ್ಮಿಕ, ರಾಜಕೀಯ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಶ್ರೀ ವಿಷ್ಣು ಯುವಶಕ್ತಿ ಬಳಗ
ಸುಮಾರು 50 ಸದಸ್ಯರನ್ನೊಳಗೊಂಡು ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಚ್ಚಾರಡ್ಕ ಸಂಘಟನೆ ಶ್ರಮ..ಸೇವೆ.ಸಹಾಯ ಎಂಬ ಧೈಯ ವಾಕ್ಯದೊಂದಿಗೆ ಸ್ಥಾಪಕಾಧ್ಯಕ್ಷರಾಗಿ ರಾಜೇಶ್ ಕೆ. ಮಯೂರ ಇವರ ನೇತೃತ್ವದಲ್ಲಿ ಆರಂಭವಾಯಿತು.

ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂಘಟನೆ ಈಗಾಗಲೇ ಸಮಾಜಸೇವೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಪ್ರಶಂಸೆಗೆ ಪಾತ್ರವಾಗಿದೆ. ಮಜಾರಡ್ಕ ಎಂಬ ಸಣ್ಣ ಊರಿನ ಹೆಸರನ್ನು ಹತ್ತೂರಿಗೆ ಪಸರಿಸುವ ಸಾಧಕ ಸಂಘಟನೆಯಾಗಿದೆ. ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮುಡಿಪಾಗಿರಿಸುವ ಸಂಘಟನೆ ಈಗಾಗಲೇ ಸ್ವಚ್ಛತಾ ಕಾರ್ಯಕ್ರಮ, ಕೌಶಲ್ಯ ತರಬೇತಿ ಕಾರ್ಯಕ್ರಮ, ರಸ್ತೆ ದುರಸ್ತಿ, ಶ್ರಮದಾನ ಕಾರ್ಯಕ್ರಮ, ಬಡತನದಲ್ಲಿರುವ ಕುಟುಂಬಕ್ಕೆ ಸಹಾಯ ಧನ, ರಕ್ತದಾನ, ನಾಯಕತ್ವ ತರಬೇತಿ ಕಾರ್ಯಗಾರ, ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಸ್ವಚ್ಛ ಗ್ರಾಮ -ಹಸಿರು ಗ್ರಾಮ ಕಾರ್ಯಕ್ರಮದಡಿ ವನಮಹೋತ್ಸವ ಕಾರ್ಯಕ್ರಮ, ಅನಾರೋಗ್ಯಕ್ಕೆ ತುತ್ತಾದ ಊರವರಿಗೆ ಸಹಾಯ ಧನ, ಕೋವಿಡ್ ತುರ್ತು ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಿಂದ ರಕ್ತದಾನ, ಕೋರೋನಾ ನಿಯಂರ್ತಣದ ಜಾಗೃತಿ ಅಭಿಯಾನ, ಊರಿನಲ್ಲಿರುವ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸುವ ಕ್ರಮ, ಸಂಘಟನೆಯ ಮೂಲಕ ಸಂಘದ ಸದಸ್ಯರು ಉತ್ತಮ ಕಾರ್ಯಗಳನ್ನು ಮುಂದುವರೆಸುತ್ತಾ ಬಂದಿದೆ.

LEAVE A REPLY

Please enter your comment!
Please enter your name here