ಎಸ್.ಎಲ್.ವಿ. ಬುಕ್ ಹೌಸ್‌ನ ಮಂಗಳೂರಿನ ಶಾಖೆಗೆ ಬಹುಭಾಷಾ ನಟ ಸುಮನ್ ತಲ್ವಾರ್ ಭೇಟಿ

0

ವಿಟ್ಲ: ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ನೇರ್ಲಾಜೆರವರ ಮಾಲಕತ್ವದ ರಾಜ್ಯದ ಪ್ರತಿಷ್ಠಿತ ಪುಸ್ತಕ ವಿತರಕ ಕಂಪೆನಿಯಾಗಿರುವ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಮಂಗಳೂರಿನ ಬಿಜೈಯಲ್ಲಿರುವ ಶಾಖೆಗೆ ಬಹುಭಾಷಾ ನಟ ಸುಮನ್ ತಲ್ವಾರ್‌ರವರು ಭೇಟಿ ನೀಡಿದರು. ಬಹುಭಾಷಾ ನಟರಾಗಿರುವ ಸುಮನ್ ತಲ್ವಾರ್ ರವರು ಸುಮಾರು ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿ ಜನಪ್ರಿಯತೆಯನ್ನು ಪಡೆದಿದ್ದಾರೆ. ಮೂಲತ: ಮಂಗಳೂರಿನವರಾಗಿರುವ ಸುಮನ್ ತಲ್ವಾರ್‌ರವರು ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಪ್ರಸಿದ್ಧ ಕರಾಟೆ ಪಟುವಾಗಿದ್ದಾರೆ.
ಕನ್ನಡ ಚಲನಚಿತ್ರವೊಂದರಲ್ಲಿ ಶೂಟಿಂಗ್‌ಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಸುಮನ್ ತಲ್ವಾರ್‌ರವರು ಮಂಗಳೂರಿನ ಬಿಜೈನಲ್ಲಿರುವ ಎಸ್.ಎಲ್.ವಿ. ಬುಕ್ ಹೌಸ್ ಗೆ ಭೇಟಿ ನೀಡಿ ಸಂಸ್ಥೆಯ ಬಗ್ಗೆ ಮಾಹಿತಿ ಪಡೆದು ಶುಭಹಾರೈಸಿದರು. ಸಂಸ್ಥೆಯ ವತಿಯಿಂದ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಸಂಚಾಲಕ ರಾಮದಾಸ್ ಶೆಟ್ಟಿ ವಿಟ್ಲ, ಗುಣಪಾಲ್ ದಾಸ್ ನೇರ್ಲಾಜೆ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here