ಪುತ್ತೂರು:ಪುತ್ತೂರಿನ ಇತಿಹಾಸದಲ್ಲಿ ಒಂದು ಶ್ರದ್ಧಾಭಕ್ತಿಯ ಕಾರ್ಯಕ್ರಮವಾಗಬೇಕೆಂಬ ದೃಷ್ಟಿಯಿಂದ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಬಾಲಗಂಗಾಧರನಾಥ ಶ್ರೀಗಳ ೭೮ನೇ ಜಯಂತ್ಯೋತ್ಸವವನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಲಾಗಿದೆ.ಪುತ್ತೂರಿನ ಸದ್ಭಕ್ತರು ಸೇರಿಕೊಂಡು ಸ್ವಾಮೀಜಿಯವರ ಸ್ಮರಣೆ ಮಾಡುವುದು, ಅವರ ಸಮಾಜಮುಖಿ ಕಾರ್ಯಗಳನ್ನು ಮೆಲುಕು ಹಾಕುವುದರ ಜೊತೆಗೆ ಕಳೆದ ೧೦ ವರ್ಷಗಳಿಂದ ಹಲವು ಸಮಾಜಸೇವಾ ಚಟುವಟಿಕೆಗಳು, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಜನತೆಯ ಮೆಚ್ಚುಗೆಗೆ ಪಾತ್ರವಾಗಿರುವ ಆದಿಚುಂಚನಗಿರಿಯ ಪ್ರಸ್ತುತ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಕಾರ್ಯಕ್ರಮದ ಮೂಲಕ ಅವರ ಪಾದಪೂಜೆ ಮಾಡಬೇಕೆನ್ನುವ ತೀರ್ಮಾನದಿಂದ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ.ಒಕ್ಕಲಿಗ ಸಮಾಜ ಈ ಕಾರ್ಯಕ್ರಮದ ನೇತೃತ್ವ ತೆಗೆದುಕೊಂಡಿದೆ.ಆದರೆ ಕಾರ್ಯಕ್ರಮ ಎಲ್ಲ ಹಿಂದೂ ಭಗವದ್ಭಕ್ತರಿಗೆ ಸಂಬಂಧಿಸಿದ್ದು.ಸ್ವಾಮೀಜಿ ಹಿಂದೂ ಧರ್ಮಕ್ಕೆ ಸಂಬಂಧಿಸಿದವರು.ಆ ನೆಲೆಯಲ್ಲಿ ಊರಿನ ಜಿಲ್ಲೆಯ ಎಲ್ಲಾ ಸದ್ಭಕ್ತರನ್ನು ಆಮಂತ್ರಿಸುತ್ತಿzವೆ.ಇದು ಧಾರ್ಮಿಕ ಕಾರ್ಯಕ್ರಮ. ಮಠ ಕೈಗೊಂಡ ಕಾರ್ಯಕ್ರಮಗಳನ್ನು ಸಾದರಪಡಿಸುವ ಕಾರ್ಯಕ್ರಮ.ಸಮಾಜದ ವಿವಿಧ ಪಂಗಡಗಳು ಒಟ್ಟಾಗಿ ಹೋಗಬೇಕೆನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಸುಮಾರು ೫೦ ಸಾವಿರ ಜನರನ್ನು ಸೇರಿಸಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ.೨ ತಿಂಗಳಿನಿಂದ ಸ್ವಾಗತ ಸಮಿತಿಯನ್ನು ರಚಿಸಿಕೊಂಡು,ಡಾ|ಧರ್ಮಪಾಲನಾಥ ಶ್ರೀಗಳ ಮಾರ್ಗದರ್ಶನದಲ್ಲಿ, ಡಿ.ವಿ.ಸದಾನಂದ ಗೌಡರ ಅಧ್ಯಕ್ಷತೆಯಲ್ಲಿ, ಶಾಸಕನಾಗಿ ನನ್ನ ಅಧ್ಯಕ್ಷತೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಡಾ|ಕುರುಂಜಿ ವೆಂಕಟ್ರಮಣ ಗೌಡರ ಮಕ್ಕಳ ಉಪಸ್ಥಿತಿಯಲ್ಲಿ ಜಿಲ್ಲೆಯ ಒಕ್ಕಲಿಗ ಸಮುದಾಯದ ಅಧ್ಯಕ್ಷರು ಸೇರಿ ಸ್ವಾಗತ ಸಮಿತಿ ರಚಿಸಿ ಪ್ರತೀ ಮನೆಗೆ ವಿಚಾರವನ್ನು ಒಳಗೊಂಡ ನಿವೇದನಾ ಪತ್ರವನ್ನು ಮಾಡಿ, ಮನೆಮನೆಗೆ ಕೊಟ್ಟು ಇಡೀ ರಾಜ್ಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಲ್ಲಾ ಸಚಿವರು, ನೇತಾರರು, ಅಧಿಕಾರಿಗಳು ಮತ್ತು ಪೀಠಕ್ಕೆ ಸಂಬಂಧಪಟ್ಟ ಶಾಖಾ ಮಠದ ಸ್ವಾಮೀಜಿಗಳನ್ನು ಆಹ್ವಾನಿಸಬೇಕೆಂದು ತೀರ್ಮಾನಿಸಿ ಆಮಂತ್ರಣ ಪತ್ರಿಕೆ ಮುದ್ರಿಸಿ, ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.ಪುತ್ತೂರಿನಲ್ಲೂ ಸ್ವಾಗತ ಸಮಿತಿ, ಶೋಭಾಯಾತ್ರೆ ಸಮಿತಿ, ಭೋಜನ ಸಮಿತಿ, ಚಪ್ಪರ ಸಮಿತಿ, ಸ್ವಚ್ಛತಾ ಸಮಿತಿ ಹೀಗೆ ೧೨ ಸಮಿತಿಗಳನ್ನು ಮಾಡಿ ಸಮಿತಿಗಳ ಮುಖಾಂತರ ವ್ಯವಸ್ಥಿತ ಸಿದ್ಧತೆ ಮಾಡಲಾಗಿದೆ. ವಿಜ್ರಂಭಣೆಯಿಂದ ಕಾರ್ಯಕ್ರಮ ನಡೆಯಲಿದೆ.ಜಿಲ್ಲೆಯ ಪ್ರತೀ ಭಾಗಗಳಿಂದ ಜೊತೆಗೆ ಉಡುಪಿ, ಹಾಸನ, ಕೊಡಗು ಭಾಗಗಳಿಂದ ಜನರು ಭಾಗವಹಿಸಲಿದ್ದಾರೆ.೫೦ ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಆಸನ ವ್ಯವಸ್ಥೆ, ಊಟೋಪಚಾರ, ಪಾರ್ಕಿಂಗ್, ಹೊರೆಕಾಣಿಕೆ ಉಗ್ರಾಣ ಎಲ್ಲವನ್ನೂ ನಿರ್ಮಿಸಲಾಗಿದೆ.ಪ್ರತೀ ಜವಾಬ್ದಾರಿ ವಹಿಸಿಕೊಂಡಿರುವ ಸಮಿತಿಗಳು ಪೂರ್ಣವಾಗಿ ತೊಡಗಿಸಿಕೊಂಡು ಸಿದ್ಧತೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಈ ಭಾಗದ ಜನರಲ್ಲಿ ಹೆಚ್ಚಿನವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.ಸಮುದಾಯಕ್ಕೆ ಸಂಬಂಧಿಸಿದಂತೆ ೧೯೭೯ರಲ್ಲಿ ಡಾ.ಬಾಲಗಂಗಾಧರ ಶ್ರೀಗಳು ಆದಿಚುಂಚನಗಿರಿಯಿಂದ ಬಂದು ಉಪ್ಪಿನಂಗಡಿ, ಪುತ್ತೂರು ಈ ಭಾಗಗಳಲ್ಲಿ ಸಂಚರಿಸಿ ಗ್ರಾಮವಾಸ್ತವ್ಯ ಮಾಡಿ ಧರ್ಮಜಾಗೃತಿ ಜೊತೆಗೆ ಒಕ್ಕಲಿಗರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದೆ ತರಲು ಪ್ರಯತ್ನಿಸಿದ್ದರು.ಆ ನಿಮಿತ್ತ ಸ್ವಾಮೀಜಿಯವರ ಕೆಲಸ ಕಾರ್ಯಗಳನ್ನು ನೆನಪಿಸಲು ಇದನ್ನು ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಈ ಕಾರ್ಯಕ್ರಮ ಪ್ರೇರಣೆಯಾಗಬಹುದು.
ದೇವಸ್ಥಾನ ಮುಂಭಾಗದ ೧೨ ಎಕರೆ ಗದ್ದೆಯಲ್ಲಿ ಭವ್ಯವಾದ ಪೆಂಡಾಲ್ ಹಾಕಿ ವ್ಯವಸ್ಥೆ ಮಾಡಿದ್ದೆವೆ.ಒಕ್ಕಲಿಗ ಸಮಾಜ ನೇತೃತ್ವ ತೆಗೆದುಕೊಂಡಿದೆ ಆದರೆ ಕಾರ್ಯಕ್ರಮ ಎಲ್ಲ ಹಿಂದೂ ಭಗವದ್ಭಕ್ತರಿಗೆ ಸಂಬಂಧಿಸಿದ್ದು. ಸ್ವಾಮೀಜಿ ಹಿಂದೂ ಧರ್ಮಕ್ಕೆ ಸಂಬಂಧಿಸಿದವರು.ಆ ನೆಲೆಯಲ್ಲಿ ಊರಿನ ಜಿಲ್ಲೆಯ ಎಲ್ಲಾ ಸದ್ಭಕ್ತರನ್ನು ಆಮಂತ್ರಿಸುತ್ತಿದ್ದೆವೆ.ಇದು ಧಾರ್ಮಿಕ ಕಾರ್ಯಕ್ರಮ. ಮಠ ಕೈಗೊಂಡ ಕಾರ್ಯಕ್ರಮಗಳನ್ನು ಸಾದರಪಡಿಸುವ ಕಾರ್ಯಕ್ರಮ. ಸಮಾಜದ ವಿವಿಧ ಪಂಗಡಗಳು ಒಟ್ಟಾಗಿ ಹೋಗಬೇಕೆನ್ನುವ ನಿಟ್ಟಿನಿಂದ ಕಾರ್ಯಕ್ರಮ ಆಯೋಜನೆಗೊಂಡಿದೆ.ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿ ಬಂಟಿಂಗ್ಸ್‌ಗಳ ನಡುವೆ, ಸ್ವಾಮೀಜಿಗಳು ಧರಿಸುವ ಕೇಸರಿ ಮುಖಾಂತರ ತ್ಯಾಗದ ಸಂದೇಶ ನೀಡುವ ಕೆಲಸ ಮಾಡಬೇಕೆಂದು ಕಾರ್ಯಕ್ರಮ ಮಾಡಿದ್ದೆವೆ. ಹಿಂದೂ ಸಮಾಜ ಕೇಸರಿಯಡಿ ಒಟ್ಟಾಗಬೇಕು ಎನ್ನುವ ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ಮಠಂದೂರು ಹೇಳಿದರು.
ಶಾಸಕನಾಗಿ ಮತ್ತು ಒಕ್ಕಲಿಗ ಸಮುದಾಯದ ಓರ್ವ ಮುಖಂಡನಾಗಿ ಸ್ವಾಮೀಜಿಯವರ ಬಗ್ಗೆ ಇರುವ ಭಕ್ತಿ ಮತ್ತು ಮಠದ ಜೊತೆಗಿನ ಒಡನಾಟವನ್ನು ಗಮನಿಸಿ ನಮ್ಮ ಸಮಾಜದವರು ಸಮಿತಿಯ ನೇತೃತ್ವ ನೀಡಿದ್ದಾರೆ.ನೇತೃತ್ವ ವಹಿಸಿಕೊಂಡ ಮೇಲೆ ಹಿಂದೆ ಮುಂದೆ ನೋಡದೆ ಕಾರ್ಯಪ್ರವೃತ್ತರಾಗಬೇಕು.ಈ ನೆಲೆಯಲ್ಲಿ ಇದು ನನ್ನ ಯೋಗ ಎಂದು ಭಾವಿಸಿದ್ದೆನೆ.ಹಿಂದೆ ಡಿ.ವಿಯವರು ಶಾಸಕರಾಗಿದ್ದಾಗ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಈಗ ನನ್ನ ಪಾಲಿಗೆ ಈ ಯೋಗ ಲಭಿಸಿರುವುದು ಸಂತಸ ತಂದಿದೆ ಎಂದು ಮಠಂದೂರು ಹೇಳಿದರು.