ಪುತ್ತೂರಿನ ಹೈಫೈ ವಂಚಕನಿಂದ ಹೋಟೆಲ್‌ ಗೆ ಬಾಕಿ – ಬಂಧಿಸಿ ಕರೆದೊಯ್ದ ಖಾಕಿ

0

ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿಯ ಸೋಗು ಹಾಕಿ ರಾಷ್ಟ್ರ ರಾಜಧಾನಿಯ ಹೋಟೆಲ್ ವೊಂದಕ್ಕೆ ವಂಚಿಸಿದ್ದ ಪುತ್ತೂರು ಮೂಲದ ವ್ಯಕ್ತಿಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ವ್ಯಕ್ತಿಯನ್ನು ಪುತ್ತೂರು ದರ್ಬೆ ನಿವಾಸಿ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದೆ.ಮಹಮದ್ ಷರೀಫ್ ದೆಹಲಿಯ ಸ್ಟಾರ್ ಹೋಟೆಲ್ ಗೆ 23 ಲಕ್ಷಕ್ಕೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈತ ನಕಲಿ ಬಿಸಿನೆಸ್ ಕಾರ್ಡ್ ತೋರಿಸಿ ಕಳೆದ ವರ್ಷ ಸುಮಾರು ಮೂರು ತಿಂಗಳ ಕಾಲ‌ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ ನಲ್ಲಿ ತಂಗಿದ್ದ. ಅಲ್ಲದೆ ಹೊಟೇಲ್‌ ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದು, ಬಾಕಿ ಬಿಲ್‌ ಸೇರಿದಂತೆ ಹೋಟೆಲ್‌ ಗೆ 23,46,413 ರೂ. ನಷ್ಟ ಉಂಟಾಗಿದೆ .ಘಟನೆಯ ನಂತರ, ಹೋಟೆಲ್‌ ನ ಜನರಲ್ ಮ್ಯಾನೇಜರ್ ಅನುಪಮ್ ದಾಸ್ ಗುಪ್ತಾ ನೀಡಿದ ದೂರಿನಂತೆ ಜ.14 ರಂದು ದೆಹಲಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಾಕಿ ಇರಿಸಿದ ಮೊತ್ತವನ್ನು ಪಾವತಿಸಿದ ಮೇಲೆ ಆತನನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here