ಕಾಂಗ್ರೇಸ್ ಚುಣಾವಣಾ ಪ್ರಣಾಳಿಕೆ ಸಮಿತಿ ಅದ್ಯಕ್ಷ ಜಿ.ಪರಮೇಶ್ವರ್ ರವರನ್ನು ಭೇಟಿಯಾದ ದ.ಕ.ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಖಂಡರು

0

ವಿಟ್ಲ: ಮಾಜಿ ಗೃಹ ಸಚಿವರೂ,ಕೆ.ಪಿ.ಸಿ.ಸಿ ಮಾಜಿ ಅದ್ಯಕ್ಷರೂ,ಕಾಂಗ್ರೇಸ್ ಚುಣಾವಣಾ ಪ್ರಣಾಳಿಕೆ ಸಮಿತಿ ಅದ್ಯಕ್ಷರಾಗಿರುವ ಜಿ.ಪರಮೇಶ್ವರ್ ರವರನ್ನು ದ.ಕ.ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಖಂಡರ ಭೇಟಿಮಾಡಿ ಸಮಾಲೋಚನೆ ನಡೆಸಿದರು.

ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಜಿ. ಪರಮೇಶ್ವರ್ ರವರ ತಂಡ ಮಂಗಳೂರಿನಲ್ಲಿ ಕರಾವಳಿ ಭಾಗದ ಸಂಘ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಣೆ, ಚುನಾವಣಾ ಪೂರ್ವ ಸಿದ್ದತೆ ಮಾಡುವ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಂಘಟನೆ ಪರವಾಗಿ ಸ್ಥಳೀಯ ಸಂಸ್ಥೆ ಗಳ ವಿಚಾರ ವಾಗಿ ಕೇರಳ ಮಾದರಿ ವ್ಯವಸ್ಥೆ ಜಾರಿಗೆ ತರಬೇಕು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ ಮತ್ತು ಕೆಲವು ಇನ್ನಿತರ ಪಂಚಾಯತ್ ರಾಜ್ ವ್ಯವಸ್ಥೆ ಯನ್ನು ಸಬಲೀಕರಣಗೊಳಿಸುವ ಅಂಶಗಳನ್ನು ಹೊಂದಿರುವ ಮನವಿಯನ್ನು ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಯವರ ನೇತೃತ್ವದ ನಿಯೋಗ ಅವರಿಗೆ ನೀಡಿ ವಿವರಿಸಿತು. ಮನವಿಯನ್ನು ಪಡೆದು ಮಾತಾಡಿದ ಜಿ. ಪರಮೇಶ್ವರ್ ರವರು ರಾಜ್ಯದಲ್ಲೇ ದಕ್ಷಿಣ ಕನ್ನಡ ಪಂಚಾಯತ್ ರಾಜ್ ಸಂಘಟನೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂದರು.

ಮನವಿ ಸ್ವೀಕರಿಸಿದ ಜಿ.ಪರಮೇಶ್ವರ್ ಮತ್ತು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರುಗಳಾದ ಪ್ರೊಫೆಸರ್ ರಾದಕೃಷ್ಣ ಮತ್ತು ಮದು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ , ಮಾಜಿ ಶಾಸಕ ಜೆ ಆರ್ ಲೋಬೊ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ , ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್, ಪಂಚಾಯತ್ ರಾಜ್ ಮಾಜಿ ಜಿಲ್ಲಾ ಧ್ಯಕ್ಷ ಶುಭೋದಯ ಆಳ್ವ , ಮಂಗಳೂರು ದಕ್ಷಿಣ ಬ್ಲಾಕ್ ಪಂಚಾಯತ್ ರಾಜ್ ಅಧ್ಯಕ್ಷ ಅಶ್ವಿನಿ ರಾಜ್ ಮಲ್ಲಿಕಾ ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here