ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ! ನಗರಸಭೆಯ ನೆಕ್ಕಿಲಾಡಿ ಪಂಪ್ ಹೌಸ್, ನೀರು ಶುದ್ದೀಕರಣ ಘಟಕಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ

0

ಪುತ್ತೂರು: ಪುತ್ತೂರು ನಗರಸಭೆ ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ ಸಿ)ದ ಜಂಟಿ ಸಹಯೋಗದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಯ ಕಾಮಗಾರಿಗೆ ಸಂಬಂಧಿಸಿ ನೆಕ್ಕಿಲಾಡಿ ಪಂಪ್ ಹೌಸ್ ಮತ್ತು ನೀರು ಶುದ್ದೀಕರಣ ಘಟಕ್ಕೆ ಶಾಸಕ ಸಂಜೀವ ಮಠಂದೂರು ಜ.23ರಂದು ಬೆಳಿಗ್ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.


ಪಂಪ್ ಹೌಸ್, ಜಾಕ್‌ವೆಲ್‌ನಲ್ಲಿ ಹೆಚ್ಚುವರಿ ಪಂಪ್, ಜನರೇಟರ್, ನೆಕ್ಕಿಲಾಡಿ ನೀರು ಶುದ್ದೀಕರಣ ಘಟಕದಲ್ಲಿ ಲ್ಯಾಬ್, ಕಚೇರಿ ಸಹಿತ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಶಾಸಕರು ಕಾಮಗಾರಿ ಪರಿಶೀಲಿಸಿ ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಜಲಸಿರಿ ಯೋಜನೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ ಮಾದೇಶ್, ಗುತ್ತಿಗೆದಾರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ನೀರಿನ ವಿಭಾಗದ ವಸಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here