ಸಾಹಿತಿ ಜಯಪ್ರಕಾಶ ಪುತ್ತೂರು ಅವರ ‘ಬದುಕಲು ಬಿಡಿ ಪ್ಲೀಸ್…’ ಹೊಸ ಕೃತಿ!

0

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಸಾಹಿತಿ ಜಯಪ್ರಕಾಶ ಪುತ್ತೂರು ಅವರ ‘ಬದುಕಲು ಬಿಡಿ ಪ್ಲೀಸ್…’ ಹೊಸ ಕೃತಿ ಆರನೆಯ ಪುಸ್ತಕವಾಗಿದೆ. ನಿಜ ಜೀವನದ ಹತ್ತು ಹಲವು ಮುಖಗಳನ್ನು ಓದುಗರಿಗೆ ಪರಿಚಯಿಸುವ ಈ ಹೊಸ ಕೃತಿಯಲ್ಲಿ ಲೇಖಕರ ಸ್ವಾನುಭವದ ಮಹತ್ವದ ಪದರಗಳಿವೆ. ‘ಸಪ್ನಾ ಬುಕ್ ಹೌಸ್’ ಪ್ರಕಾಶನದ ಈ ಕೃತಿಯಲ್ಲಿ ಇಪ್ಪತ್ತೈದು ಬರಹಗಳಿದ್ದು, ಒರತಿಯೊಂದೂ ಓದುಗರನ್ನು ಸ್ಪಂದಿಸುತ್ತವೆ. ಈ ಲೇಖನಗಳ ಕೃತಿಯ ಶ್ರೇಷ್ಠತೆಯೆಂದರೆ ತುಂಬ ಸರಳವಾದ, ಯಾವುದೇ ಕೃತ್ರಿಮತೆಯಿಲ್ಲದ ಅದರ ನಿರೂಪಣೆ. ಲೇಖಕರ ಮೌನ ಮನಸ್ಸಿನ ಭಾವನೆಗಳ ಹಿಂದಿನ ಅಪೂರ್ವ ಸಂದೇಶವಾಗಿ ‘ಇನ್ನೊಬ್ಬರನ್ನು ಬದುಕಲು ಬಿಡುವ ಸದ್ಗುಣ’ದ ಬಗ್ಗೆ ಹೃದಯಂಗಮವಾಗಿ ಜಯಪ್ರಕಾಶರು ಅಭಿವ್ಯಕ್ತಿಸಿದ್ದಾರೆ. ನಮ್ಮ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿರುವ ಸಂದೇಶಗಳನ್ನು ನೇರವಾಗಿ ಓದುಗರಿಗೆ ತಲುಪಿಸುವ ಪ್ರಯತ್ನದ ಫಲ ಬಹುತೇಕ ಲೇಖನಗಳಲ್ಲಿ ಎರಕಹೊಯ್ದಿದ್ದಾರೆ.

ಇಂದು ಹೇಗೆ ಸಾಹಿತ್ಯ ಅದ್ಭುತ ಸಮೂಹ ಮಾಧ್ಯಮವೆನಿಸಿದೆಯೋ ಅದರ ಒಳ-ಹೊರಗಿನ ಸ್ಪಂದನ ಹೇಗಿರಬೇಕೆಂಬುದನ್ನು ಅಕ್ಷರಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ ಜಯಪ್ರಕಾಶ ಪುತ್ತೂರು. ಅವರು ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿರಬೇಕಾದ ಅನಿವಾರ್ಯತೆಯನ್ನು ಪ್ರತಿಬಿಂಬಿಸುವ ‘ಕ್ಷಮೆ’ ಓದುಗರು ಓದಲೇ ಬೇಕಾದಂತಹ ಲೇಖನವಾಗಿದೆ.

ಲೇಖಕರು ತಮ್ಮ ಜೀವನದ ಅನೇಕ ಅನುಭವಗಳನ್ನು ಅಕ್ಷರಗಳಲ್ಲಿ ಪೋಣಿಸುತ್ತಾ ಹೀಗೆ ಓದುಗರ ಮುಂದಿಡುತ್ತಾರೆ:

‘ಬದುಕಲು ಬಿಡಿ ಪ್ಲೀಸ್’ ಈ ಲೇಖನಗಳ ಸಂಕಲನದಲ್ಲಿ ಗಮನಿಸಬಹುದಾದ ಪ್ರಮುಖ ಬರಹಗಳೆಂದರೆ, ‘ತಾಳ್ಮೆ ಎಂಬ ತಾರಕಮಂತ್ರ!’, ‘ಸಾಮಾಜಿಕ ಸುದ್ದಿಜಾಲಗಳಲ್ಲಿ ಸ್ವಯಂ ಶಿಸ್ತು’, ‘ಕೆಲಸದಲ್ಲಿ ಶ್ರದ್ದೆ ಹಾಗೂ ರಾಷ್ಟ್ರಪ್ರೇಮ’, ‘ಫೇಸ್‌ಬುಕ್ ಮನೋಭಾವ’, ‘ನಿಮಗೆ ವಯಸ್ಸಾಯಿತಲ್ಲಾ…’, ‘ಬಹುಜನ ಹಿತಾಯ… ಬಹುಜನ ಸುಖಾಯ’, ‘ಸಕಾರಾತ್ಮಕ ಭಾಚವ ಎಂಬ ಜೀವನದಿ’, ‘ಸಾರ್ವಜನಿಕ ಸೇವೆ ಎಂಬ ಸವಕಲು ನಾಣ್ಯ’, ‘ಪರರ ಮೇಲಿನ ಹಿತದೃಷ್ಟಿಯೇ ಶ್ರೇಷ್ಠ ಜೀವನ ಧರ್ಮ’, ‘ಸುಲಭವಾಗಿ ಸಿಗುವ ಉಚಿತ ಸೇವೆ’, ‘ನಾಗರಿಕ ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆ’, ‘ಒಂದು ಸಣ್ಣ ರಾಷ್ಟ್ರವಾದ ಸಿಂಗಾಪುರ ದೇಶದ ಮಹಿಮೆ!’, ‘ಜನಪ್ರತಿನಿಧಿಗಳಿಗೆ ಜನತೆ ವಿಧಿಸಬಹುದಾದ ನೀತಿಸಂಹಿತೆಗಳು’, ‘ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ದೇಶ ಸಾಧಿಸಿದ ಸ್ವಾವಲಂಬನೆ ಹೆಜ್ಜೆಗಳು’, ‘ನಮ್ಮ ದೇಶದ ಹಳ್ಳಿಗಳ ಕಲ್ಯಾಣ ಬಯಸಿದ ಡಾ. ಕಲಾಂ ಅವರ ‘ಪುರ’ ಯೋಜನೆ’, ಮಾನವೀಯತೆ ಹಾಗೂ ಸರಳತೆಗಳನ್ನು ಪ್ರತಿಪಾದಿಸಿ ಬಾಳಿದ ಕಲಾಂ ಸರ್’-ಮುಂತಾದ ಸಾಹಿತ್ಯಿಕ ಮೌಲ್ಯಗಳನ್ನು ಪ್ರತಿಪಾದಿಸುವ ಜಯಪ್ರಕಾಶ ಪುತ್ತೂರುರವರ ಲೇಖನಗಳ ‘ಬದುಕಲು ಬಿಡಿ ಪ್ಲೀಸ್…’ ಪ್ರತಿಯೊಬ್ಬರ ಮನೆ ಮನೆಯಲ್ಲೂ ಇರಲೇಬೇಕಾದಂತಹ ಒಂದು ಅಪರೂಪದ ಕೃತಿಯಾಗಿದೆ.

LEAVE A REPLY

Please enter your comment!
Please enter your name here