Saturday, February 4, 2023

Homeಚಿತ್ರ ವರದಿ13 ನೇ ರಾಷ್ಟ್ರೀಯ ಮತದಾರರ ದಿನಾಚರಣೆ -2023

13 ನೇ ರಾಷ್ಟ್ರೀಯ ಮತದಾರರ ದಿನಾಚರಣೆ -2023

ಮತದಾನ ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ – ಗಿರೀಶ್ ನಂದನ್

* ಮತದಾನ ಪ್ರತಿಜ್ಞಾ ವಿಧಿ ಸ್ವೀಕಾರ
* ಭೇಟಿ ಪಡಾವೋ, ಭೇಟಿ ಬಜಾವೋ ಪ್ರತಿಜ್ಞಾ ವಿಧಿ ಸ್ವೀಕಾರ
* ಅತಿ ಹೆಚ್ಚು ಯುವ ಮತದಾರರನ್ನು ಸೇರ್ಪಡೆಗೆ ಸನ್ಮಾನ
* ಅತಿ ಹೆಚ್ಚು ಆಧಾರ್, ಒಟರ್ ಐಡಿ ಜೋಡಣೆ ಮಾಡಿದವರಿಗೆ ಪ್ರಮಾಣ ಪತ್ರ
* ಮತದಾನ ಜಾಗೃತಿ ಸ್ಪರ್ಧಾ ವಿಜೇತರಾದವರಿಗೆ ಬಹುಮಾನ ವಿತರಣೆ

ಪುತ್ತೂರು: ಚುನಾವಣೆಯಲ್ಲಿ ಯುವ ಮತದಾರರನ್ನು ಗಮನದಲ್ಲಿಟ್ಟುಕೊಂಡು ಭಾರತದ ಚುನಾವಣಾ ಆಯೋಗ ಈ ವರ್ಷದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ‘ಮತದಾನಕ್ಕಿಂತ ಇನ್ನೊಂದಿಲ್ಲ’ ‘ನಾನು ಖಚಿತವಾಗಿ ಮತದಾನ ಮಾಡುವೆ’ ಎಂದು ಘೋಷಣೆ ನೀಡಿದಂತೆ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸಿಲಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜ.25 ರಂದು ಪುತ್ತೂರು ತಾಲೂಕು ಆಡಳಿತದ ನೇತೃತ್ವದಲ್ಲಿ ಪುರಭವನದಲ್ಲಿ 13 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು. ಮತದಾರ ನೋಂದಣಾಧಿಕಾರಿ ಸಹಾಯಕ ಆಯುಕ್ತ ಗಿರೀಶ್‌ನಂದನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮತದಾನ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನೆರವೇರಿಸಿದರು. ಸಭೆಯಲ್ಲಿದ್ದವರು ಪ್ರತಿಜ್ಞೆ ಸ್ವೀಕರಿಸಿದರು.


ಮತದಾನ ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ:
ಮತದಾರ ನೋಂದಣಾಧಿಕಾರಿ ಸಹಾಯಕ ಆಯುಕ್ತ ಗಿರೀಶ್‌ನಂದನ್ ಅವರು ಮಾತನಾಡಿ ಈ ವರ್ಷ ಚುನಾವಣೆ ಆಯೋಗ ಬಹಳಷ್ಟು ಪ್ರಚಾರ ಮಾಡುತ್ತಿದೆ. ಸಂವಿಧಾನದ ಜೊತೆಗೆ ಆರ್ಟಿಕಲ್ 326 ರಲ್ಲಿ ಎಲ್ಲರಿಗೂ ಮತದಾನದಲ್ಲಿ ಸಮಾನವಾದ ಹಕ್ಕು ನೀಡಲಾಗಿದೆ. ನಾವು ಆರಿಸಿ ಕಳುಹಿಸಿದ ವ್ಯಕ್ತಿ ನಮಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುತ್ತಾರೋ ಇಲ್ಲವೋ ಎಂಬುದಕ್ಕೆ 5 ವರ್ಷಕ್ಕೊಮ್ಮೆ ನಿರ್ಧಾರ ಮಾಡುವ ಅವಕಾಶವಿದೆ. ಈ ಅವಕಾಶವನ್ನು ಮಿಸ್ ಮಾಡದೆ ಮತ ಚಲಾಯಿಸಿ. ಯಾಕೆಂದರೆ ಇದು ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ನಮ್ಮಲ್ಲಿ ಕೆಲವು ಕಡೆ 50, 60, 20 ಮತ್ತು 90 ಶೇಕಡ ಮತದಾನ ಆದದ್ದೂ ಇದೆ. ಯಾಕೆ ಶೇ.100 ರಷ್ಟು ಮತದಾನ ಆಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅದಲ್ಲೂ ಯುವ ಮತದಾರರು ಮತದಾನದಲ್ಲಿ ನಿರಾಶಕ್ತಿ ಹೊಂದಿರುವುದು ಕಂಡು ಬಂದಿದೆ. ಆದ್ದರಿಂದ ಚುನಾವಣೆ ಆಯೋಗ 2011 ನೇ ಇಸವಿಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಕಾರಣದಿಂದಾಗಿ ಮತದಾನ ದಿನಾಚರಣೆಯನ್ನು ಜಾರಿಗೆ ತಂದಿದೆ ಎಂದರು.


ಆಧುನಿಕತೆಯಲ್ಲೂ ವಿದ್ಯಾವಂತರ ಕಲ್ಲು ಹೃದಯ ಕರಗಲಿಲ್ಲ:
ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸ ಐವನ್ ಲೊಬೋ ಅವರು ಉಪನ್ಯಾಸದಲ್ಲಿ ನೀಡಿದರು. ಮಹತ್ಮಾ ಗಾಂಧೀಜಿಯವರು ಹೇಳಿದ ಮಾರ್ಮಿಕ ವಿಚಾರದಲ್ಲಿ ದೇಶದ ಅಪಾಯ ವಿದ್ಯಾವಂತ ಜನರ ಕಲ್ಲು ಹೃದಯ ಎಂಬ ಮಾತು ಇವತ್ತಿನ ಆಧುನಿಕ ಯುಗದಲ್ಲೂ ಬದಲಾಗಿಲ್ಲ. ಇದರೊಂದಿಗೆ ಮುಗ್ದ ಜನರ ತಲೆ ಕೆಡಿಸುವ ಕೆಲಸ ಕಾಣ್ತಾ ಇದೆ. ಈ ನಿಟ್ಟಿನಲಿ ಅಧಿಕಾರದಲ್ಲಿ ಇರುವವರು ನಿರಂತರ ಅಧಿಕಾರದಲ್ಲಿ ಮುಂದುವರಿದಾಗ ಅವರ ದರ್ಪವನ್ನು ತಡೆಗಟ್ಟಲು ಬಹುಮತ ದಬ್ಬಾಳಿಗೆಯನ್ನು ತಡೆಗಟ್ಟಲು, ಮುಖ್ಯವಾಗಿ ಯುವಕರು ಕ್ಷಣಿಕ ಆಸೆಗಳಿಗೆ ಒಳಗಾಗಿ ಮತದಾನ ಮಾಡಿ ದೀರ್ಘಕಾಲಿಕ ಹಿತಾಸಕ್ತಿಗಳನ್ನು ಬಲಿಕೊಡದಂತೆ ಮಾಡಲು, ಶ್ರೇಣಿಯುತ ಅಸಮಾನತೆಗಳನ್ನು ಮುರಿಯುವುದು, ಅವಕಾಶ ಸಮಾನತೆಯನ್ನು ಕಟ್ಟಕಡೆಯ ವ್ಯಕ್ತಿಗೆ ಸಿಗುವಂತೆ ಮಾಡುವುದಕ್ಕಾಗಿ ಮತದಾನ ಅಗತ್ಯವಿದೆ ಎಂದರು.


ಯುವ ಮತದಾರರ ಮತದಾನ ಪ್ರಕ್ರಿಯೆಯಲ್ಲಿ ಬಾಗಿಯಾಗಬೇಕು:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು. ಅಮೇರಿಕಾ, ಇಂಗ್ಲೆಂಡ್ ನಲ್ಲಿ ಚಿಹ್ನೆ ಇಲ್ಲ. ಆದರೆ ಭಾರತದಲ್ಲಿ ಮಾತ್ರ ಚಿಹ್ನೆ ಇದೆ. ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದರು.

ಯಾರೂ ಮತದಾನದಿಂದ ವಂಚಿತರಾಗಬಾರದು:
ಸ್ವೀಫ್ ಅಧಿಕಾರಿಯಾಗಿರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಮಾತನಾಡಿ ದೇಶದಲ್ಲಿ ಅತಿ ದೊಡ್ಡ ಭಾಗ ಮತದಾನ. ಚುನಾವಣಾ ಆಯೋಗ ನಿಸ್ಪಕ್ಷವಾಗಿ ಕೆಲಸ ಮಾಡುತ್ತಾ ಬಂದಿದೆ. ಮತದಾನದ ಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಸ್ವೀಫ್ ಕಾರ್ಯಕ್ರಮ ಮಾಡುತ್ತಿದ್ದೇವೆ. ಚುನಾವಣಾ ಆಯೋಗ ನಿರ್ದೇಶನದಂತೆ ಮಹಿಳೆಯರು ಜಾಸ್ತಿ ಇದ್ದಲ್ಲಿ ಪಿಂಕ್ ಬೂತ್ ಮಾಡಲಿದ್ದೇವೆ. ಬೆಂಗಳೂರಿನಂತಹ ಭಾಗದಲ್ಲೂ ಮತದಾನ ಕಡಿಮೆ ಇದೆ. ಕರಾವಳಿ ಭಾಗದಲ್ಲಿ ಜಾಸ್ತಿ ಇದೆ. ಈ ಭಾರಿ ನೂರರಷ್ಟು ಮತದಾನ ಆಗಬೇಕು ಎಂದರು.

ಸನ್ಮಾನ, ಪ್ರಮಾಣ ಪತ್ರ ವಿತರಣೆ:
ಅತೀ ಹೆಚ್ಚು ಯುವ ಮತದಾರರನ್ನು ಸೇರ್ಪಡೆ (708) ಮಾಡಿದ ವಿವೇಕಾನಂದ ಕಾಲೇಜಿನ ಅಸಿಸ್ಟೆಂಡ್ ಪ್ರೊ.ದೀಪಿಕಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅತಿ ಹೆಚ್ಚು ಆಧಾರ್ ಮತ್ತು ಒಟರ್ ಐಡಿಯನ್ನು ಜೋಡಣೆ ಮಾಡಿದ ಬಿಎಲ್‌ಒ ರವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಸ್ವಿಪ್ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಮತದಾನ ಜಾಗೃತಿ ಕುರಿತ ಸ್ಪರ್ಧೆಗಳಲ್ಲಿ  ವಿಜೇತರಿಗೆ ಬಹುಮಾನ ವಿತರಣೆಯನ್ನು ಇದೇ ಸಂದರ್ಭದಲ್ಲಿ ಮಾಡಲಾಯಿತು.


ಭೇಟಿ ಬಚಾವೊ ಭೇಟಿ ಪಡಾವೋ ಪ್ರತಿಜ್ಞಾ ವಿಧಿ ಸ್ವೀಕಾರ:
ಹೆಣ್ಣು ಮಗುವಿನ ಅನುಪಾತಕ್ಕೆ ಸಂಬಂಧಿಸಿ ಭೇಟಿ ಬಜಾವೋ, ಭೇಟಿ ಪಡಾವೋ ಎಂಬ ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಅವರು ನೆರವೇರಿಸಿದರು. ಉಪತಹಶಿಲ್ದಾರ್ ಸುಲೋಚನಾ, ಕಂದಾಯ ಅಧಿಕಾರಿ ದಯಾನಂದ, ಕಂದಾಯ ನಿರೀಕ್ಷಕ ಗೋಪಾಲ್, ಚುನಾವಣಾ ಶಾಖೆಯ ಕನಕರಾಜ್ ಅತಿಥಿಗಳನ್ನು ಗೌರವಿಸಿದರು. ರಾಮಕೃಷ್ಣ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಹಾಯಕ ಮತದಾರ ನೋಂದಣಾಧಿಕಾರಿಯಾಗಿರುವ ತಹಸೀಲ್ದಾರ್ ನಿಸರ್ಗ ಪ್ರಿಯ ಸ್ವಾಗತಿಸಿದರು. ಉಪತಹಸೀಲ್ದಾರ್ ಸುಲೋಚನಾ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೂತ್ ಮಟ್ಟದ ಸೂಪರ್ ವೈಸರ್‌ಗಳು, ಮತದಾರ ಅಧಿಕಾರಿಗಳು ಉಪಸ್ಥಿತರಿದ್ದರು.

18 ವರ್ಷ ಆದವರೆಲ್ಲರೂ ಮತದಾನ ನೋಂದಾಣಿ ಮಾಡಿಕೊಳ್ಳಿ
18 ವರ್ಷ ಆದವರೆಲ್ಲರೂ ಮತದಾನ ನೋಂದಾವಣೆ ಮಾಡಿಕೊಳ್ಳಿ. ಇದಕ್ಕಾಗಿ ನಾವು ಅಯಪ್ ಕ್ರಿಯೇಟ್ ಮಾಡಿದ್ದೇವೆ. ಕಚೇರಿ ಅಳೆದಾಟದ ಅವಶ್ಯಕತೆ ಇಲ್ಲ. ನಿಮ್ಮಲ್ಲಿ ಮನೆಗೆ ನಮ್ಮ ಬಿಎಲ್‌ಒಗಳು ಬರುತ್ತಾರೆ. ಅವರೇ ಅಯಪ್ ನಲ್ಲಿ ನಿಮ್ಮ ದಾಖಲೆ ಎಂಟ್ರಿ ಮಾಡುತ್ತಾರೆ. ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡುವ ಅವಕಾಶವಿದೆ. ಮುಂದೆ ನಿಮಗೆ ಪೋಸ್ಟ್ ಮೂಲಕ ಒಟರ್ ಐಡಿ ಬರುತ್ತದೆ. ನೀವು ಯಾರನ್ನು ಕೇಳುವ ಅವಶ್ಯಕತೆ ಇಲ್ಲ. ಎಲ್ಲರು ಮತದಾನ ಕಡ್ಡಾಯವಾಗಿ ಮಾಡಬೇಕು.
ಗಿರೀಶ್ ನಂದನ್, ಮತದಾರ ನೋಂದಣಾಧಿಕಾರಿ

LEAVE A REPLY

Please enter your comment!
Please enter your name here

Must Read

spot_img
error: Content is protected !!