ಪುತ್ತೂರು : ಜ. 23 ಮತ್ತು 24ರಂದು ಮಟ್ಟದ ಕಲಿಕಾ ಹಬ್ಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿ ಸಂಭ್ರಮದಿಂದ ನಡೆಯಿತು.
ಆಕರ್ಷಕ ಮೆರವಣಿಗೆಯೊಂದಿಗೆ ಅತಿಥಿಗಳನ್ನು ಆಹ್ವಾನಿಸಲಾಯಿತು. ಹಾಡಿನೊಂದಿಗೆ ಬಣ್ಣಹಚ್ಚುವ ಮೂಲಕ ಹಬ್ಬದ ಚಾಲನೆಯನ್ನು ವಿದ್ಯಾರ್ಥಿಗಳಿಂದ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ ಅವರು ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಆಗಮಿಸಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀವನ್ ವೇಗಸ್ , ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾರಾಯಣ ಸುವರ್ಣ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧಾಕರ ಕುಲಾಲ್. ಗ್ರಾಮ ಪಂಚಾಯತ್ ಸದಸ್ಯರಾದ ತಾರಾನಾಥ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪ್ರಾಸ್ತಾವಿಕ ಮಾತನ್ನು ಹಬ್ಬದ ನೋಡಲ್ ಆಗಿರುವ ಜಯರಾಮ ಶೆಟ್ಟಿ, ಸ್ವಾಗತ ನರಿಮೊಗರು ಕ್ಲಸ್ಟರಿನ ಸಿ.ಆರ್.ಪಿ. ಪರಮೇಶ್ವರಿ, ವಂದನಾರ್ಪಣೆ ಆನಡ್ಕ ಶಾಲಾ ಮುಖ್ಯಗುರುಗಳಾದ ಶುಭಲತಾ.ನಿರೂಪಣೆಯನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಚರಣ್ ಕುಮಾರ್ ಇವರು ನೆರವೇರಿಸಿದರು.
ಕಲಿಕಾ ಹಬ್ಬದ ಪ್ರಯುಕ್ತ ಶ್ರೀ ತಾರನಾಥ ಸವಣೂರು ಮುಖ್ಯ ಗುರುಗಳು ಇವರ ಸಂಯೋಜನೆಯಲ್ಲಿ ಯಕ್ಷಗಾನ ಬಯಲಾಟ ನಡೆಯಿತು.
ಕಲಿಕಾ ಹಬ್ಬದಲ್ಲಿ ನಾಲ್ಕು ಕಾರ್ನರ್ ಗಳ ಮೂಲಕ ಕ್ಲಸ್ಟರಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಸೇರಿ ಒಟ್ಟು 12 ಶಾಲೆಗಳ 120 ವಿದ್ಯಾರ್ಥಿಗಳಿಗೆ ಹಾಡು-ಆಡು,ಮಾಡು-ಆಡು,ಕಾಗದ -ಕತ್ತರಿ ಮತ್ತು ಊರು ತಿಳಿಯೋಣ ಎಂಬ ಹೆಸರಿನೊಂದಿಗೆ ಕಲಿಕೆಯನ್ನು ಚಟುವಟಿಕೆ ಮತ್ತು ಆಟಗಳ ಮೂಲಕ ಅನುಕೂಲಿಸಲಾಯಿತು.
ಕ್ಲಸ್ಟರಿನ ಐವರು ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರ ಶಾಸ್ತ್ರಿ, ಮಾಲತಿ, ಸುನೀತ ,ಶೋಭಾ , ಶಶಿಕಲಾ ಇವರು ಪ್ರತೀ ಕಾರ್ನರ್ ಗಳ ಉಸ್ತುವಾರಿ ವಹಿಸಿದ್ದರು. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಚರಣ್ ಕುಮಾರ್ ಹಬ್ಬವನ್ನು ವ್ಯವಸ್ಥಿತವಾಗಿ ಮುನ್ನಡೆಸಿದರು.ಆನಡ್ಕ ಶಾಲಾ ಶಿಕ್ಷಕಿಯರಾದ ಪೆಲಿಸಿಟಾ ಕುನ್ಹಾ, ಅಕ್ಷತಾ,ಅತಿಥಿ ಶಿಕ್ಷಕಿ ಸೌಮ್ಯ ,ಮತ್ತು ಶ್ರೀಮತಿ ಲೀಲಾವತಿ ಸಹಕರಿಸಿದರು.ನರಿಮೊಗರು ಕ್ಲಸ್ಟರ್ ನ ಎಲ್ಲಾ ಮುಖ್ಯ ಗುರುಗಳ ಸಹಕಾರದೊಂದಿಗೆ ಮಕ್ಕಳ ಕಲಿಕಾ ಹಬ್ಬ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.