ಜ.30: ದ.ಕ., ಉಡುಪಿ ಜಿಲ್ಲೆಗಳ ಗ್ಯಾರೇಜ್ ಮಾಲಕರ, ನೌಕರರ ಮಂಗಳೂರು ಚಲೋ, ಮಹಾ ಸಮಾವೇಶ; ಪುತ್ತೂರು ವಲಯದಿಂದ 300 ಮಂದಿ ಭಾಗವಹಿಸುವಿಕೆ

0

ಪುತ್ತೂರು: ದ.ಕ ಹಾಗೂ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ನೇತೃತ್ವದಲ್ಲಿ ಜ.30ರಂದು ಮಂಗಳೂರು ಚಲೋ ಹಾಗೂ ಪ್ರಪಥಮ ಬಾರಿಗೆ ಉಭಯ ಜಿಲ್ಲೆಗಳ ಗ್ಯಾರೇಜ್ ಮಾಲಕರ ಹಾಗೂ ನೌಕರರ ಬೃಹತ್ ಮಹಾ ಸಮಾವೇಶ ಮಂಗಳೂರು ಪುರಭವನದಲ್ಲಿ ಜ.30ರಂದು ಆಯೋಜಿಸಲಾಗಿದೆ.

ಜ.30ರಂದು ಬೆಳಿಗ್ಗೆ 7.30ಕ್ಕೆ ಉಡುಪಿ ಜಿಲ್ಲೆಯ ಎಲ್ಲಾ ಗ್ಯಾರೇಜ್ ಮಾಲಕರು ಮತ್ತು ಕಾರ್ಮಿಕರು ಉದ್ಯಾವರದ ಸಂಘದ ಕಚೇರಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿ ಮಂಗಳೂರಿಗೆ ತಮ್ಮ ತಮ್ಮ ವಾಹನಗಳ ಮೂಲಕ ಹೊರಡಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಮಂಗಳೂರು ಜ್ಯೋತಿ ಸರ್ಕಲ್‌ನಿಂದ ಪುರಭವನದವರೆಗೆ ಪಾದಯಾತ್ರೆಯ ಮೂಲಕ ತೆರಳಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ. 10.30ಕ್ಕೆ ಸಮಾವೇಶ ಸಮಾರಂಭ ಆರಂಭಗೊಳ್ಳಲಿದೆ. ಸಮಾವೇಶದಲ್ಲಿ ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಮಂಗಳೂರು ಜೆಪ್ಪು ಸಂತ ಆಂಥೋನಿ ಆಶ್ರಮದ ನಿರ್ದೇಶಕ ಫಾ.ಜೆಬಿ ಕ್ರಾಸ್ತಾ ಹಾಗೂ ಉಳ್ಳಾಲದ ಸೈಯದ್ ಮದನಿ ದರ್ಗಾ ಇದರ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಮತ್ತು ಸಕ್ಕರೆ ಸಚಿವ ಎ. ಶಿವರಾಮ್ ಹೆಬ್ಬಾರ್, ಮಂಗಳೂರಿನ ಅರವಿಂದ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ಆರೂರು ಕಿಶೋರ್ ರಾವ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ದ.ಕ ಹಾಗೂ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪುತ್ತೂರು ವಲಯದ ಸುರೇಶ್ ಸಾಲಿಯಾನ್ ಹಾಗೂ ಕಾರ್ಯದರ್ಶಿ ಶರತ್ ಕುಮಾರ್ ರೈ ತಿಳಿಸಿದ್ದಾರೆ.

ಪುತ್ತೂರು ವಲಯದಿಂದ ಸುಮಾರು 300 ಮಂದಿ ಗ್ಯಾರೇಜ್ ಮಾಲಕರು ಮತ್ತು ನೌಕರರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here