








ವಿಟ್ಲ ಪಡ್ನೂರು ಗ್ರಾಮದ ಕೋಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಶೆಟರ್ ನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿದು ಕಳವಿಗೆ ಪ್ರಯತ್ನಿಸಿದ್ದ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಬಂಟ್ವಾಳ ತಾಲ್ಲೂಕು, ಕೊಳ್ನಾಡು ಗ್ರಾಮ, ಬಾರಬೆಟ್ಟು ತಾಳಿತ್ತನೂಜಿ ಟಿ.ಕೆ ಅಬ್ದುಲ್ ಖಾದರ್ ಮಗ ಟಿ.ಕೆ ಅಬ್ದುಲ್ ಸಲಾಂ(37ವ) ಬಂಧಿತ ಆರೋಪಿ. ಕೃತ್ಯಕೆ ಬಳಸಿದ ವಾಹನ ಝೈಲೋ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಮುಖ್ಯ ಆರೋಪಿ -ಸೂತ್ರದಾರ ಅಬೂಬಕ್ಕರ್ ಸಿದ್ಧೀಕ್ ತಲೆಮರೆಸಿಕೊಂಡಿರುತ್ತಾನೆ.














