ವಿಜಯ ಸಂಕಲ್ಪ ಅಭಿಯಾನ- ಶಾಸಕರಿಂದ ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಚಾಲನೆ

0
ಪುತ್ತೂರು:  ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ಸಾನಿಧ್ಯ ಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬೂತು ಸಮಿತಿ   163ರಲ್ಲಿ  ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.‌
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ, ಪ್ರಧಾನ ಕಾರ್ಯದರ್ಶಿ  ನಿತೀಶ್ ಕುಮಾರ್ ಶಾಂತಿವನ, ತಾಲೂಕು ಪಂಚಾಯತ್  ಮಾಜಿ  ಸದಸ್ಯರಾದ ಹರೀಶ್ ಬಿಜತ್ರೆ, ಶಕ್ತಿಕೇಂದ್ರ ಅಧ್ಯಕ್ಷ ರಾಜೇಶ್ ಪರಪುಂಜ,  ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ  ಪ್ರದೀಪ್ ಸೇರ್ತಾಜೆ ಹಾಗೂ ಬೂತು ಸಮಿತಿ  ಅಧ್ಯಕ್ಷ ಪ್ರವೀಣ್ ಪಲ್ಲತ್ತಾರು, ಪಂಚಾಯತ್ ಮಾಜಿ ಸದಸ್ಯ ಜಯರಾಮ  ರೈ ನೀರ್ಪಾಡಿ.  ಬಾಲಕೃಷ್ಣ ರೈ ಗೋವಿಂದಮುಲೆ, ತ್ಯಾಂಪನ್ನ ಆಳ್ವ ಕಲ್ಲಡ್ಕ, ವಸಂತ್ ಶೆಟ್ಟಿ ಕಲ್ಲಡ್ಕ,  ಸತೀಶ್ ರೈ ಕಲ್ಲಡ್ಕ, ಬಾಬು ಕೆ ಪಲ್ಲತ್ತಾರು, ಕಲ್ಲಡ್ಕ ಸತೀಶ್ ನಾಯ್ಕ ಪಲ್ಲತ್ತಾರು ಪುರಂದರ ನಾಯ್ಕ ಪಲ್ಲತ್ತಾರು ಜಗದೀಶ್ ಪಲ್ಲತ್ತಾರು ಪುರಂದರ ಶೆಟ್ಟಿ ಮುಡಾಲ ಶಿವರಾಮ ಗೌಡ ಬೊಳ್ಳಾಡಿ ಶೇಸಪ್ಪ ಪೂಜಾರಿ ಪಲ್ಲತ್ತಾರು ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ ದಿವಾಕರ ಪೂಜಾರಿ ಪಲ್ಲತ್ತಾರು ಯತೀಶ್ ದರ್ಬೆ ರಮೇಶ್ ಪಲ್ಲತ್ತಾರು  ರಮೇಶ್ ಸುವರ್ಣ ದರ್ಬೆತ್ತಡ್ಕ ಬಾಬು ಪ್ರಸಾದ್ ರಮೇಶ್ ರೈ ಪಡ್ಪು  ವೇದಾವತಿ  ಗೀತಾ ಸುಮತಿ ರತ್ನವತಿ  ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here