ಒಡಿಯೂರು ಸಂಸ್ಥಾನಕ್ಕೆ ಹರಿದು ಬಂದ ಹಸಿರುವಾಣಿ ಹೊರೆಕಾಣಿಕೆ:ಪೆ.30-31: ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ

0

ವಿಟ್ಲ: ಯಾವುದೇ ಕಾರ್ಯಕ್ರಮದ ಯಶಸ್ಸು ಹೊರೆಕಾಣಿಕೆಯಲ್ಲಿ ತಿಳಿಯುತ್ತದೆ. ಹೊರೆಕಾಣಿಕೆ ಸಮರ್ಪಣೆ ವರ್ಷಂಪ್ರತಿ ಹೆಚ್ಚಾಗುತ್ತಾ ಹೋಗುತ್ತಿದೆ. ಉಗ್ರಾಣ ಹೊರೆಕಾಣಿಕೆಯಿಂದ ತುಂಬಿ ಬಂದಿದೆ.
ಪರಿಶ್ರಮ ಬಹಳ ದೊಡ್ಡದಾದುದು. ನಮ್ಮಲ್ಲಿರುವ ಒಂದಂಶವನ್ನು ಭಗವಂತನಿಗೆ ಅರ್ಪಿತವಾದರೆ ಉತ್ತಮ ಸಮಾಜ ಸೃಷ್ಠಿಯಾಗಲು ಸಾಧ್ಯ. ನಾಳಿದ್ದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರ ಭಾಗಿಯಾಗಿ ಕಾರ್ಯಕ್ರಮವನ್ನು‌ ಯಶಸ್ಸುಗೊಳಿಸೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಚಿತ್ರ: ಕ್ಲಿಕ್ ಪಾಯಿಂಟ್ ಕನ್ಯಾನ


ಅವರು ಒಡಿಯೂರು ಸಂಸ್ಥಾನದಲ್ಲಿ ಜ.30-31 ರಂದು ನಡೆಯಲಿರುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಪ್ರಯುಕ್ತ ಜ.28 ರಂದು ಕ್ಷೇತ್ರಕ್ಕೆ ಆಗಮಿಸಿದ ಹಸಿರುವಾಣಿ ಯನ್ನು ಸ್ವಾಗತಿಸಿ, ಉಗ್ರಾಣದಲ್ಲಿ ದೀಪ ಬೆಳಗಿಸಿ ಅವರು ಆಶೀರ್ವಚನ ನೀಡಿದರು.

ಸಾಧ್ವಿ ಮಾತಾನಂದಮಯೀ, ಉದ್ಯಮಿ ವಾಮಯ್ಯ ಶೆಟ್ಟಿ ಚೆಂಬೂರು,‌ಅವರ ಪತ್ನಿ ರೇವತಿ‌ವಾಮಯ್ಯ ಶೆಟ್ಟಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಿರಣ್ ಕುಮಾರ್ ಉರ್ವ, ಲಿಂಗಪ್ಪ ಗೌಡ ಪಣೆಯಡ್ಕ, ಸರ್ವಾಣಿ ಪಿ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಆಶೋಕ್ ಕುಮಾರ್ ಬಿಜೈ, ರಾಧಾಕೃಷ್ಣ ಪಕ್ಕಳ ಸುಳ್ಯ, ಮಧುಕಿರಣ್ ಮೂಳೂರು. ಸೇರಾಜೆ ಗಣಪತಿ ಭಟ್, ಯಶವಂತ ವಿಟ್ಲಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳು ಸೇರಿದಂತೆ ದ.ಕ. ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾಧಿಗಳು ಸಂಗ್ರಹಿಸಿದ ಹಸಿರುವಾಣಿಯ ವಾಹನಗಳು ಮಧ್ಯಾಹ್ನ ಕನ್ಯಾನ ತಲುಪಿತು. ಎಲ್ಲಾಭಾಗಗಳಿಂದ ಬಂದ ವಾಹನಗಳು ಕನ್ಯಾನದಲ್ಲಿ ಜೊತೆಯಾಗಿ ಅಲ್ಲಿಂದ ವೈಭವದ ಶೋಭಾಯಾತ್ರೆಯ ಮೂಲಕ ಹೊರೆಕಾಣಿಕೆಗಳು ಕ್ಷೇತ್ರ ತಲುಪಿತು.

 

LEAVE A REPLY

Please enter your comment!
Please enter your name here