ಈಶ್ವರಮಂಗಲ ಹಿಂಜಾವೆಯಿಂದ ನಿರ್ಮಾಣಗೊಂಡ ದಿ.ದೇವಿಪ್ರಸಾದ್ ಶೆಟ್ಟಿ ಅವರ ಗೃಹಪ್ರವೇಶ – ಭಾರತ್ ಮಾತಾ ಪೂಜನಾ, ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಸಮರ್ಪಣೆ

0

ಪುತ್ತೂರು: ಈಶ್ವರಮಂಗಲ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ನಿರ್ಮಾಣಗೊಂಡ ದಿ.ದೇವಿಪ್ರಸಾದ್ ಶೆಟ್ಟಿ ಬಂಟುಕಲ್ಲು ಇವರ ಮನೆ ಶ್ರೀ ದೇವಿ ನಿಲಯದ ಗೃಹಪ್ರವೇಶ ಹಾಗೂ ಭಾರತ ಮಾತ ಪೂಜನ ಮತ್ತು ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಸಮರ್ಪಣೆ ಕಾರ್ಯಕ್ರಮ ಜ.28 ರಂದು ನಡೆಯಿತು.


ಬೆಳಗ್ಗೆ ಗಣಪತಿ ಹೋಮ ದೊಂದಿಗೆ ಕಾರ್ಯಕ್ರಮ ಆರಂಭವಾಗಿ ಹಿಂ.ಜಾ.ವೇ ಈಶ್ವರಮಂಗಲದ ಗೌರವಾಧ್ಯಕ್ಷರಾದ ಶ್ರೀಕೃಷ್ಣ ಭಟ್ ಮುಂಡ್ಯ ಕಲ್ಪವೃಕ್ಷ ನೆಡುವ ಮೂಲಕ ಮನೆಯ ಸಂದೇಶವನ್ನ ಸಾರಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆಯ ಪ್ರಾಂತ ಪ್ರ.ಶಿಕ್ಷಣ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ ವ್ಯಕ್ತಿ ಸಂಘಟನೆ ಜೊತೆ ಸೇರಿ ಸಮರ್ಪಣಾ ಭಾವದಿಂದ ಸಮಾಜ ಮುಖಿಯಾಗಿ ಬದುಕಿದರೆ ಸಂಘಟನೆ ಯಾವ ಸಂದೇಶ ನೀಡಿದೆ ಎಂಬುದಕ್ಕೆ ಈ ಕನಸಿನ ಮನೆಯೇ ಸಾಕ್ಷಿ ಆಗಿದೆ ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ನವೀನ್ ಪ್ರಸಾದ್ ಕೈಕಾರ, ನಿವೃತ್ತ ಮುಖ್ಯ ಗುರುಗಳಾದ ಸದಾಶಿವ ರೈ ನಡುಬೈಲು, ಹಿಂ.ಜಾ.ವೇ ಪ್ರಮುಖರಾದ ಅಜಿತ್ ಹೊಸಮನೆ, ದಿನೇಶ್ ಪಂಜಿಗ,ಈಶ್ವರಮಂಗಲ ಘಟಕದ ಸಂಚಾಲಕರಾದ ಪ್ರಜ್ವಲ್ ಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂ.ಜಾ.ವೇ ಪ್ರಮುಖರಾದ ಚಿನ್ಮಯ್ ಈಶ್ವರಮಂಗಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೌರೀಶ್ ಈಶ್ವರಮಂಗಲ ಸ್ವಾಗತಿಸಿ, ರಾಜೇಶ್ ಪಂಚೋಡಿ ವಂದಿಸಿದರು. ಕಾರ್ಯಕ್ರಮದಲ್ಲಿ 3ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಸಮರ್ಪಣೆ ಮಾಡಿ, ಕನಸಿನ ಮನೆಗೆ ಸೇವಾ ರೂಪದಲ್ಲಿ ಕೆಲಸ ಮಾಡಿದ ಅನೇಕ ಸ್ವಯಂಸೇವಾ ಕಾರ್ಯಕರ್ತರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಮತ್ತು ಸ್ಥಳೀಯ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಪೊಟೋ: ಕನಸಿನ ಮನೆ

LEAVE A REPLY

Please enter your comment!
Please enter your name here