ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಥಸಪ್ತಮಿ ಕಾರ್ಯಕ್ರಮ

0

ಪುತ್ತೂರು:ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ರಥ ಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸೂರ್ಯನ ಕುರಿತು ಮತ್ತು ಸೂರ್ಯ ನಮಸ್ಕಾರದ ಪ್ರಾಮುಖ್ಯತೆಯನ್ನು ಆರ್ಟ್ ಆಫ್ ಲಿವಿಂಗ್ನ ಯೋಗ  ಶಿಕ್ಷಕಿ ಶರಾವತಿ ತಮ್ಮ ಬೌದ್ಧಿಕನಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಡಾ. ಅಮೃತ ಪ್ರಸಾದ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು  ಉಪಸ್ಥಿತರಿದ್ದರು.

ರಥ ಸಪ್ತಮಿ ಪ್ರಯುಕ್ತ ಆಟದ ಮೈದಾನದಲ್ಲಿ ಸಾಮೂಹಿಕ ಸೂರ್ಯನಮಸ್ಕಾರವನ್ನು ಆಯೋಜಿಸಲಾಗಿತ್ತು. 1500 ವಿದ್ಯಾರ್ಥಿಗಳು ಮಂತ್ರ ಸಹಿತ ಸೂರ್ಯನಮಸ್ಕಾರ ಪ್ರದರ್ಶನ ನೀಡಿದರು. ಭಾಗವಹಿಸಿರುವ ವಿದ್ಯಾರ್ಥಿಗಳು ಅತ್ಯಾಕರ್ಷಕ ರೀತಿಯಲ್ಲಿ ಸಂಪದಗೊಂಡಿದ್ದರು.

ಸಾಮೂಹಿಕ ಸೂರ್ಯನಮಸ್ಕಾರ ಪ್ರದರ್ಶನ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಭಾಸ್ಕರ್ ಗೌಡ ಎಂ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ನಮಿತಾ.ಕೆ.ಕೆ ಕಾರ್ಯಕ್ರಮ ನಿರೂಪಿಸಿದ್ದು ಆಶಾಲತಾ ಕಾರ್ಯಕ್ರಮ ಸಂಯೋಜಿಸಿದ್ದರು. ಗಿರೀಶ್ ಕಣಿಯಾರು, ದೀಪಕ್ ಕಲ್ಲೇಗ ರಶ್ಮಿ.ಎಚ್.ಕೆ ಮತ್ತು ಪವನ್ ಕುಮಾರ್ ಯಾದವ್ ಅವರುಗಳು ವಿದ್ಯಾರ್ಥಿಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ಸಂಪದಗೊಳಿಸಿ ಯೋಗ ಪ್ರದರ್ಶನ ವ್ಯವಸ್ಥೆಯನ್ನು ಮಾಡಿದರು.

LEAVE A REPLY

Please enter your comment!
Please enter your name here