








ಪುತ್ತೂರು: ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಪ್ರತಿ ಬೂತ್ ಗಳಲ್ಲಿ ನಡೆಯುತ್ತಿದ್ದು, ಜ.೨೯ ರಂದು ಬಿಜೆಪಿ ನಗರ ಮಂಡಲದಿಂದ ಕೊಂಬೆಟ್ಟು ವಾರ್ಡ್ ನಲ್ಲಿ ಅಭಿಯಾನ ನಡೆಯಿತು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಅಭಿಯಾನದಲ್ಲಿ ನೀಲಂತ್ ಬೊಳುವಾರು, ಗಣೇಶ್ ಬಾಳಿಗ, ರಾಮಚಂದ್ರ ಘಾಟೆ, ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು. ಕೊಂಬೆಟ್ಟು ಚಿಕ್ಕಪುತ್ತೂರು ಭಾಗದಲ್ಲಿ ಅಭಿಯಾನ ನಡೆಯಿತು.












