ಸಾಗುವಳಿ ಚೀಟಿಗಾಗಿ ಆಮೀಷವೊಡ್ಡಿದರೆ ನೇರವಾಗಿ ನನಗೆ ತಿಳಿಸಿ-ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

0

  • ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಕಾರ್ಯ ನಡೆಯಬೇಕು

ಪುತ್ತೂರು: ಸರಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಕೃಷಿ ಮಾಡುವ ಸಂದರ್ಭ ಕೃಷಿಕರಿಗೆ ಆ ಜಾಗವನ್ನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡುತ್ತದೆ. ಈ ಸಂದರ್ಭ ಸಾಗುವಳಿ ಚೀಟಿಗಾಗಿ ಬೇಡಿಕೆ, ಆಮೀಷವೊಡ್ಡಿದ್ದರೆ ಯಾವುದೇ ಮುಲಾಜಿ ಇಲ್ಲದೆ ನೇರವಾಗಿ ನನಗೆ ತಿಳಿಸಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 

ಪುತ್ತೂರು ಪುರಭವನದಲ್ಲಿ ಎ.7ರಂದು ನಡೆದ ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರಿ ಜಾಗವಾದರೆ 4.94 ಎಕ್ರೆ ತನಕ ಕೊಡಲು ಅವಕಾಶವಿದೆ. ಇಲ್ಲಿ ಕುಮ್ಕಿ, ಕಾನಬಾನೆ, ಪರಂಬೋಕನ್ನು ಕೊಡಲು ಅವಕಾಶವಿಲ್ಲ. ಇದನ್ನು ಹೊರತಾಗಿ ಒಂದಷ್ಟು ಮಂದಿ ಅಡ್ಡದಾರಿಯಲ್ಲಿ ಹೋಗುವವರು ಇದ್ದಾರೆ. ಇಂತಹಸಂದರ್ಭದಲ್ಲಿ ಯಾರು ಯಾವುದೇ ಅಡ್ಡದಾರಿಯಲ್ಲಿ ಹೋಗದೆ ಯಾರಿಗೆ ದುಡ್ಡು ಕೊಡದೆ, ಕಾನೂನಿನ ಇತಿಮಿತಿಯಲ್ಲಿ ಅವಕಾಶವಿದ್ದರೆ ನೂರಕ್ಕೆ ನೂರು ಸಂಜೀವ ಮಠಂದೂರು ಮತ್ತು ತಹಶೀಲ್ದಾರ್ ಅಕ್ರಮಸಕ್ರಮ ಮಂಜೂರಾತಿ ಮಾಡಿ ಸಾಗುವಳಿ ಚೀಟಿ ಕೊಡಲು ಬದ್ದರು. ಯಾರಾದರು ಅಕ್ರಮಸಕ್ರಮ ಜಾಗಕ್ಕೆ ಸಾಗುವಳಿ ಚೀಟಿ ಸಿಗಲು ಬೇಡಿಕೆ, ಆಮಿಷ ಒಡ್ಡಿದ್ದಾರೆ ನೇರವಾಗಿ ನನಗೆ ತಿಳಿಸಿ ಯಾವುದೇ ಮೂಲಾಜಿ ಬೇಡ. ಸಮಿತಿಗೆ ಪೈಲ್ ಬರುವ ಮೊದಲೇ ತಿಳಿಸಿ. ಯಾಕೆಂದರೆ ನಾವು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಬೇಕೆಂದು ಯೋಚನೆ ಮಾಡಿದ್ದೇವೆ. ಆದರೆ ಕೆಲವರು ಹಣಕೊಟ್ಟೇ ಕೆಲಸ ಮಾಡಿಸುವವರಿದ್ದಾರೆ. ಈ ಸಂದರ್ಭ ಭ್ರಷ್ಟಾಚಾರ ನಿಮ್ಮಿಂದಲೂ ಆಗುತ್ತದೆ. ನೀವು ಹಣ ಕೊಟ್ಟ ಕಾರಣ ಸಂಬಂಧಪಟ್ಟವರು ತೆಗೆದು ಕೊಂಡಿದ್ದಾರೆ. ಅವರೇನು ನಿಮ್ಮ ಮನೆ ಬಾಗಿಲಿಗೆ ಬಂದು ಹಣದ ಬೇಡಿಕೆ ಇಟ್ಟಿಲ್ಲ. ಸಂತೆಯಲ್ಲಿ ವ್ಯಾಪಾರ ಮಾಡಿದಂತೆ ಚೌಕಾಸಿ ಭ್ರಷ್ಟಾಚಾರ ಮಾಡಬೇಡಿ ಎಂದರು. ತಹಸೀಲ್ದಾರ್ ರಮೇಶ್ ಬಾಬು ಸ್ವಾಗತಿಸಿದರು. ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್ ಬಲ್ನಾಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here