ಪುತ್ತೂರು ಅರಣ್ಯ ಇಲಾಖೆಯ ಅರಣ್ಯಾಧಿಕಾರಿಯಾಗಿ ಜಿತೇಶ್ ಪಿ

0

ಪುತ್ತೂರು: ಪುತ್ತೂರು ಅರಣ್ಯ ಇಲಾಖೆಯ ಅರಣ್ಯಾಧಿಕಾರಿಯಾಗಿ ಜಿತೇಶ್ ಪಿ.ಯವರು ನೇಮಕವಾಗಿದ್ದಾರೆ. ಅರಣ್ಯ ಇಲಾಖೆಯ ಮಂಗಳೂರು ವಲಯದ ಬಂಟ್ವಾಳ ವ್ತಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಗಸ್ತು ಪಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಇವರಿಗೆ ಪುತ್ತೂರು ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದೆ.ಅ.15ರಂದು ಪುತ್ತೂರಿಗೆ ಆಗಮಿಸಿದ್ದಾರೆ.


ಅಕ್ರಮ ಮರ ಕಡಿಯುವುದು ಮತ್ತು ಕಳ್ಳಸಾಗಾಣಿಕೆ ತಡೆಗಟ್ಟುವ ಸಾಧನೆಗಾಗಿ ಮತ್ತು ದಕ್ಷ ,ನಿಷ್ಠೆ ಹಾಗೂ ಪ್ರಾಮಾಣಿಕತೆಯ ಸೇವೆಗಾಗಿ ಇವರನ್ನು ಕರ್ನಾಟಕ ಸರಕಾರವು ಅ.08 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಚಿನ್ನದ ಪದಕ ನೀಡಿ ಸನ್ಮಾನಿಸಿದ್ದಾರೆ.


ಇವರು ಮಂಗಳೂರಿನ ಕುಳಾಯಿ ಚಿತ್ರಾಪುರದ ನಿವಾಸಿಯಾದ ಯಾಧವ ಪುತ್ರನ್ ಹಾಗೂ ಸೇವಂತಿ ಕಾಂಚನ ದಂಪತಿಯ ಪುತ್ರನಾದ ಇವರು ಪಂಜ,ಮಂಗಳೂರು,ಬಂಟ್ವಾಳ ವಲಯದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿದ್ದರು. ಬಂಟ್ವಾಳ ಸರಕಾರಿ ನೌಕರರ ಸಂಘದ ನಾಮ ನಿರ್ದೇಶಿತ ಸದಸ್ಯನಾಗಿ ಸಂಘದಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here