ಎ.9: ಕುಂಜಾಡಿಯಲ್ಲಿ ಯಕ್ಷಗಾನ ಬಯಲಾಟ, ಎ.10 ನೇಮೋತ್ಸವ

0

  • ಎ. 11 :ತುಳು ಹಾಸ್ಯ ನಾಟಕ

ಪುತ್ತೂರು: ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಎ.9 ರಂದು ರಾತ್ರಿ 8.30 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟವಾಗಿ ನೂತನ ಪ್ರಸಂಗ ನಡೆಯಲಿದೆ. ರಾತ್ರಿ ಶ್ರೀ ದೇವರ ಚೌಕಿ ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಎ. 1೦ ರಂದು ಸಂಜೆ 4 ಕ್ಕೆ ದೈವಗಳ ಭಂಡಾರ ತೆಗೆಯುವುದು, ಸಂಜೆ 6 ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8 ರಿಂದ ಅನ್ನಸಂತರ್ಪಣೆ, ರಾತ್ರಿ 8.30 ರಿಂದ ಶ್ರೀ ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಎ.11 ರಂದು ಸಂಜೆ 6 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನೇತೃತ್ವದಲ್ಲಿ ಚಾಪರ್ಕ ಕಲಾವಿದರಿಂದ `ಪನಿಯೆರ ಅವಂದಿನ’ ತುಳು ಹಾಸ್ಯ ನಾಟಕ ಜರಗಲಿದೆ ಎಂದು ಕುಂಜಾಡಿ ನಾರಾಯಣ ರೈ ಮತ್ತು ಕುಂಜಾಡಿ ಮಂಜುನಾಥ ರೈಯವರು ತಿಳಿಸಿದ್ದಾರೆ.

                               

ಕುಂಜಾಡಿಯಲ್ಲಿ ಸಿದ್ಧತಾ ಸಭೆ:

ಎ.7 ರಂದು ಕುಂಜಾಡಿ ಮನೆಯಲ್ಲಿ ಕಾರ್‍ಯಕ್ರಮದ ಸಿದ್ದತೆಯ ಬಗ್ಗೆ, ವಿವಿಧ ಸಮಿತಿಗಳ ನಿರ್ವಹಣೆಯ ಬಗ್ಗೆ ಸಮಾಲೋಚನಾ ಸಭೆ ಜರಗಿತು.ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳರವರು ಮಾತನಾಡಿ ಎ. 9 ರಿಂದ 11 ರತನಕ ನಡೆಯುವ ಎಲ್ಲಾ ಕಾರ್‍ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವಲ್ಲಿ ಎಲ್ಲರೂ ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

 ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಾಮಾಜಿಕ ಮುಂದಾಳು ಸಂತೋಷ್ ಕುಮಾರ್ ರೈ ಬೊಳಿಯಾರು, ಜಗದೀಶ್ ಅಧಿಕಾರಿ, ವಿನಯಾನಂದ, ಜಿ.ಪಂ, ಮಾಜಿ ಸದಸ್ಯ ಎಸ್.ಎನ್.ಮನ್ಮಥ, ಪ್ರಕಾಶ್ ಕುಮಾರ್ ಅರಿಗ ಬಂಬಿಲಗುತ್ತು, ಪ್ರಪುಲ್ಲಾಚಂದ್ರ ರೈ ಕುಂಜಾಡಿ ಸಹಿತ ಊರ,ಪರವೂರ ಹಿತೈಷಿಗಳು ಹಾಗೂ ಕುಂಜಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಕಾರ್‍ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here