ರೋಟರಿ ಸ್ವರ್ಣದಿಂದ ಫಿಲೋಮಿನಾ ಆ.ಮಾ.ಪ್ರಾಥಮಿಕ ಶಾಲೆಗೆ ವಾಟರ್ ಫ್ಯೂರಿ ಫೈಯರ್ ಕೊಡುಗೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ 6000ಲೀ.ನ ವಾಟರ್ ಫ್ಯೂರಿಫೈಯರ್ ಅನ್ನು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.

ರೋಟರಿ ಸ್ವರ್ಣ ಅಧ್ಯಕ್ಷ ಭಾಸ್ಕರ ಕೋಡಿಂಬಾಳರವರು ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಿಸ್ ರವರಿಗೆ ವಾಟರ್ ಫ್ಯೂರಿಫೈಯರ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಸ್ವರ್ಣದ ಕಾರ್ಯದರ್ಶಿ ಆನಂದ ಮೂವಪ್ಪು, ಮಾಜಿ ಅಧ್ಯಕ್ಷ ಸುರೇಶ್ ಎಂ, ಮೆಂಬರ್ ಶಿಪ್ ಛೇರ್ ಮ್ಯಾನ್ ರೋಯಿಸ್ಟನ್ ಡಾಯಸ್, ಮಾಜಿ ಕಾರ್ಯದರ್ಶಿ ಆಶಾ ರೆಬೆಲ್ಲೋ, ಯೂತ್ ಸರ್ವಿಸ್ ನಿರ್ದೇಶಕ ದೇವದಾಸ್, ಜೊತೆ ಕಾರ್ಯದರ್ಶಿ ದಿನೇಶ್ ಆಚಾರ್ಯ, ಫಿಲೋಮಿನಾ ಶಾಲಾ ಶಿಕ್ಷಕಿಯರಾದ ಮರಿಯಾ ಡಿ’ಕೋಸ್ಟ, ಜೆಸ್ಲಿನ್, ಗೊಲೆಟ್, ಡೈನಾರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here