ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಎ.10ರಂದು ಶ್ರೀ ರಾಮನವಮಿ ಉತ್ಸವ ನಡೆಯಲಿದೆ.ಬೆಳಿಗ್ಗೆ ಬೆಳಗ್ಗಿನ ಪೂಜೆ ನಂತರ ಸಾಮೂಹಿಕ ಪ್ರಾರ್ಥನೆ, ಶ್ರೀ ರಾಮನಾಮ ತಾರಕ ಮಹಾಯಜ್ಞ, ಶ್ರೀ ರಾಮ ದೇವರಿಗೆ ಪವಮಾನ ಸೂಕ್ತ ಕಲಶಾಭಿಷೇಕ, ಶ್ರೀ ರಾಮ ಜಪ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಯಜ್ಞದ ಪೂರ್ಣಾಹುತಿ, ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ ಭಜನೆ, ರಾತ್ರಿ ರಂಗಪೂಜೆ, ಶ್ರೀ ರಾಮ ದೇವರ ಉತ್ಸವ, ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ ಪ್ರಸಾದ ಭೋಜನ ನಡೆಯೆಲಿದೆ. ನಂತರ ಧಾರ್ಮಿಕ ಉಪನ್ಯಾಸ ನಡೆಯಲಿದ್ದು ವಿಶ್ವ ಹಿಂದೂ ಪರಿಷತ್ ಪುತ್ತೂರು ಧರ್ಮಪ್ರಸಾರ ವಿಭಾಗದ ಜಿಲ್ಲಾ ಪ್ರಮುಖ್ ಶ್ರೀಕೃಷ್ಣ ಉಪಾಧ್ಯಾಯರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಳಿಕ ಶ್ರೀ ರಾಮಕುಂಜೇಶ್ವರ ಮಿತ್ರವೃಂದ, ರಾಮಕುಂಜ ಇವರ ಆಶ್ರಯದಲ್ಲಿ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯದ’ ನಂಬುಂಡ ನಂಬುಲೆ ‘ ತುಳು ವಿಭಿನ್ನ ಶೈಲಿಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.