ವಿಟ್ಲ: ಇಡ್ಕಿದು ಗ್ರಾಮದ ಉರಿಮಜಲು ಮೂಲಮನೆಯಲ್ಲಿ ಕಬ್ಬಿನ ಹಿತ್ತಿಲು ಕುಟುಂಬ ಚರಿತ್ರೆಯನ್ನೊಳಗೊಂಡ ‘ಕಬ್ಬಿನ ಹಿತ್ತಿಲು ಕಲ್ಪವೃಕ್ಷ’ ಪುಸ್ತಕ ಬಿಡುಗಡೆ ಸಮಾರಂಭ ಎ.11ರಂದು ನಡೆಯಲಿದೆ.
ಹೊಸದಿಗಂತ ಪತ್ರಿಕೆಯ ನಿರ್ದೇಶಕರಾದ ದು. ಗು. ಲಕ್ಷಣರವರು ಕೃತಿಬಿಡುಗಡೆ ಮಾಡಲಿದ್ದಾರೆ. ವಿಟ್ಲ ಅರಮನೆಯ ಬಂಗಾರು ಅರಸರು, ಉರಿಮಜಲು ಕುಟುಂಬದ ಕುಲಪುರೋಹಿತರಾದ ವೇದಮೂರ್ತಿ ಗೋಪಾಲಕೃಷ್ಣ ಭಟ್ಟ್ ನೂಜಿ,”ಕಬ್ಬಿನ ಹಿತ್ತಿಲು ಕಲ್ಪವೃಕ್ಷ” ಗ್ರಂಥದ ಸಂಪಾದಕರಾದ ಡಾ. ಶ್ರೀಧರ ಎಚ್. ಜಿ. ಮುಂಡಿಗೆಹಳ್ಳ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಪಾದಕೀಯ ಮಂಡಳಿಯ ಪ್ರಕಟಣೆ ತಿಳಿಸಿದೆ.