ಅಂಬಿಕಾ ವಿದ್ಯಾಲಯ ( ಸಿಬಿಎಸ್ ಇ) ಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಬೇಸಗೆ ಶಿಬಿರದ ಸಮಾರೋಪ

0

ಪುತ್ತೂರು : ನಗರದ ಬಪ್ಪಳಿಗೆ ಯ ಅಂಬಿಕಾ ವಿದ್ಯಾಲಯ (ಸಿಬಿಎಸ್ ಇ ) ದಲ್ಲಿ ಏಪ್ರಿಲ್ ತಿಂಗಳ 4 ರಿಂದ 8 ರವರೆಗೆ ಬೇಸಗೆ ಶಿಬಿರ ನಡೆದ ಶಿಬಿರದ ಸಮಾರೋಪ ಸಮಾರಂಭವು ಏ.8 ರಂದು ಸಂಜೆ ನಡೆಯಿತು.

 

ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್ ಶಿಕ್ಷಕಿ ಅನುರಾಧ ಮಾತನಾಡುತ್ತಾ ಸ್ಕೌಟ್ ಮತ್ತು ಶಿಬಿರಗಳಲ್ಲಿ ವಿಶೇಷವಾಗಿ ಶಿಬಿರಾಗ್ನಿಯನ್ನು ಮಾಡುತ್ತೇವೆ. ಶಿಬಿರದ ಉಳಿದ ದಿನಗಳಲ್ಲಿ ಮಾಡಿದ ದಣಿವಾ ರಿಸಲು, ಎಲ್ಲಾ ಶ್ರಮದಲ್ಲಿಯೂ ಖುಷಿಯನ್ನು ಅನುಭವಿಸಲು ಶಿಬಿರಾಗ್ನಿಯನ್ನು ಮಾಡುತ್ತಾರೆ. ಬೆಳಕು ಅಂದರೆ ಶಕ್ತಿ, ಖುಷಿ ಪಡುವುದರಿಂದ ಪ್ರತಿಯೊಬ್ಬರ ಶರೀರವು ಚೈತನ್ಯದಾಯಕವಾಗಿರಲು ಸಾಧ್ಯ. ಪ್ರತಿಯೊಬ್ಬರ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಸೂಕ್ತ ವೇದಿಕೆ ದೊರಕಿದಂತಾಗುವುದು. ವೇದಿಕೆಯ ಭಯವನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ದೇಶದ ಮೇಲೆ ಪ್ರೀತಿ ಇರಬೇಕು, ಪ್ರತಿಯೊಬ್ಬರೂ ನಾನು ನನ್ನದು ಎನ್ನದೆ ನಾವು ನಮ್ಮದು ಎಂಬ ಭಾವನೆಯಿಂದ ಮೇಲು ಕೀಳೆ ನ್ನದೆ ಸಮಾನವಾಗಿ ದುಡಿದು ಕರ್ತವ್ಯವೆ ದೇವರು ಎನ್ನುತ್ತಾ ಜೈ ಜವಾನ್ ಜೈ ಕಿಸಾನ್ ಎನ್ನುವ ನುಡಿಯಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರಿದ ವಿದ್ಯಾರ್ಥಿಗಳು ಬ್ರಾತೃತ್ವ ಭಾವ ನೆಯಿಂದ ದೇಶಕ್ಕೋಸ್ಕರ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂಬುದಾಗಿ ಶಿಬಿರಾಗ್ನಿಯನ್ನು ಉದ್ಘಾಟಿಸಿ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರು ಶ್ರ ಬಾಲಕೃಷ್ಣ ಬೋರ್ಕರ್ ತಿಳಿಸಿದರು. ಸಮಾರಂಭದ ವೇದಿಕೆಯಲ್ಲಿ ವಿದ್ಯಾಲಯದ ಪ್ರಾಂಶುಪಾಲರು ಮಾಲತಿ ಡಿ, ಗೈಡ್ಸ್ ಶಿಕ್ಷಕಿ ಚಂದ್ರಕಲಾ ಉಪಸ್ಥಿತರಿದ್ದರು.

ನಂತರ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾಲಯದ ಸ್ಕೌಟ್ ಮಾಸ್ಟರ್  ಸತೀಶ್ ಇರ್ದೆ ಧನ್ಯವಾದ ಸಮರ್ಪಿಸಿ ಶಾಂತಿ ಮಂತ್ರದೊಂದಿಗೆ ಶಿಬಿರ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here