





ಕಡಬ: ಕಡಬ ಪರಿಸರದಲ್ಲಿ ಶನಿವಾರ ಸಂಜೆಯ ಗುಡುಗು ಸಹಿತ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ಸಂಭವಿಸಿದೆ.








ನೂಜಿಬಾಳ್ತಿಲ ಗ್ರಾಮದ ಪಲಯಮಜಲು ದೇವಸ್ಯ ಎಂಬವರ ಮನೆಯ ಮೇಲ್ಚಾವಣಿಗೆ ಹಾಕಲಾಗಿದ್ದ ಸೀಟುಗಳು ಗಾಳಿಗೆ ಹಾರಿ ಹೋಗಿ ಬಿದ್ದಿವೆ. ಘಟನೆಯಲ್ಲಿ ಅಪಾರ ನಷ್ಟ ಉಂಟಾಗಿದ್ದು, ಮನೆಯೊಳಗಿನ ಸಾಮಾಗ್ರಿಗಳು ಮಳೆಗೆ ಒದ್ದೆಯಾಗಿವೆ ಎಂದು ತಿಳಿದುಬಂದಿದೆ.









