ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಜ್ಜಾರಡ್ಕ ವತಿಯಿಂದ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶ್ರೀ ವಿಷ್ಣು ಯುವ ಶಕ್ತಿ ಪ್ರಶಸ್ತಿ

0

ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ದ.ಕ‌.ಜಿ.ಪ.ಉ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದು ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ ಎಪ್ರಿಲ್ 9 ರಂದು ಶ್ರೀ ವಿಷ್ಣು ಯುವ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು .

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ SDMC ಅಧ್ಯಕ್ಷರಾದ ಟಿ. ಸುಂದರ ವಹಿಸಿಕೊಂಡಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ಮಜ್ಜಾರಡ್ಕ ಯುವಶಕ್ತಿ ಸಂಘಟನೆಗೆ ಅಭಿನಂದನೆ ತಿಳಿಸಿದರು. ಮುಖ್ಯ ಗುರುಗಳಾದ ವಿಜಯ ಕೆ, ಸಮೂಹ ಸಂಪನ್ಮೂಲ ವ್ಯಕ್ತಿ ನಿರಂಜನ್ ಎಂ. ಜೆ, ಇವರು ಮಾತನಾಡಿ ಕೊರೋನಾ ಮಹಾಮಾರಿ ಸಂಧರ್ಭದಲ್ಲಿ ಈ ಸಂಘಟನೆಯು ತಿಂಗಳಾಡಿ ಶಾಲಾ ಆರಂಭ ಸಂಧರ್ಭದಲ್ಲಿ ಸ್ಯಾನಿಟೈಸರ್ ಬಳಸಿ ಸ್ವಚ್ಚತಾ ಕಾರ್ಯ ಹಾಗೂ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ.) ಮಜ್ಜಾರಡ್ಕ ಇದರ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ “ಮಯೂರ” ಅವರು ಮಾತನಾಡಿ ಅತ್ಯಧಿಕ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಅವಕಾಶ ನೀಡಿದಕ್ಕೆ ಧನ್ಯವಾದ ತಿಳಿಸುವುದರೊಂದಿಗೆ ಇನ್ನೂ ಮುಂದೆಯೂ ಈ ಸಂಘಟನೆ ಶಾಲಾ ಪರವಾಗಿ ಕೆಲಸ ಕಾರ್ಯಮಾಡಲು ಸಿದ್ದರಾಗಿರುತ್ತೆವೆ ಎಂದು ತಿಳಿಸಿದರು. ಗೌರವ ಸಲಹೆಗರಾರದ ಶಾಂತಪ್ಪ ಪೂಜಾರಿ ಒಲ್ತಾಜೆ, ಉಪಸ್ಥಿತರಿದ್ದರು.

ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಸೌಜನ್ಯ, ಕುಮಾರಿ ಜಸ್ಮಿತಾ, ಕುಮಾರಿ ಅಸ್ಮಿತಾ, ಕುಮಾರಿ ಫಾತಿಮತ್ ತಸ್ನೀಮ್ ಇವರಿಗೆ ಸಂಘಟನೆಯ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಶ್ರೀ ವಿಷ್ಣು ಯುವ ಶಕ್ತಿ ಪ್ರಶಸ್ತಿ ಸನ್ಮಾನಪತ್ರ ಮತ್ತು ಸ್ಮರಣಿಕೆ ಹಾಗೂ ನಗದು ನೀಡಿ ವೇದಿಕೆಯಲ್ಲಿ ಉಪಸ್ಥಿತರಿದ್ದವರು ಮತ್ತು ಸಂಘಟನೆಯ ಪಧಾದಿಕಾರಿಗಳು ಗೌರವಿಸಿದರು.

ಕಾರ್ಯಕ್ರಮ ನಿರೂಪಣೆ ಶಿಕ್ಷಕಿ ಸೌಮ್ಯ, ಹಾಗೂ ಧನ್ಯವಾದವನ್ನು ಶಿಕ್ಷಕಿ  ಜಾನಕಿ, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಕ್ಕಳನ್ನು ಪ್ರೋತ್ಸಾಹಿಸಿದ ಯುವ ಶಕ್ತಿ ಬಳಗ ಕಾರ್ಯಗಳಿಗೆ ಗಣ್ಯರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂಧರ್ಭದಲ್ಲಿ ಶಾಲಾ ಶಿಕ್ಷಕವೃಂದ,ವಿದ್ಯಾರ್ಥಿವೃಂದ ಹಾಗೂ ಮಕ್ಕಳ ಪೋಷಕರು ಮತ್ತು ಶ್ರೀ ವಿಷ್ಣು ಯುವ ಶಕ್ತಿ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here