ಕೋಡಿಂಬಾಡಿ: ಸಮುದಾಯದತ್ತ ಶಾಲೆ, ಪ್ರತಿಭಾ ಪುರಸ್ಕಾರ, ನಿವೃತ್ತ ಮುಖ್ಯ ಶಿಕ್ಷಕಿ ಕಮಲಾರವರಿಗೆ ಗೌರವಾರ್ಪಣೆ

0

ಪುತ್ತೂರು: ಕೋಡಿಂಬಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ. 9ರಂದು ಸಮುದಾಯದತ್ತ ಶಾಲೆ, ಪ್ರತಿಭಾ ಪುರಸ್ಕಾರ ಮತ್ತು ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಕಮಲಾರವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಶುಭಹಾರೈಸಿದರು.

ಎಸ್. ಡಿ. ಎಂ. ಸಿ. ಅಧ್ಯಕ್ಷ ಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಯನಾ ಜಯಾನಂದ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ಪೂರ್ಣಿಮಾ ಶೆಟ್ಟಿ ಬರಮೇಲು, ಶಾಂತಿನಗರ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ವಿಷ್ಣುಪ್ರಸಾದ್, ಶಿಕ್ಷಕಿ ಜಯಂತಿ ಮತ್ತು ಕೋಡಿಂಬಾಡಿ ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಬರಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೋಡಿಂಬಾಡಿ ಹಿ.ಪ್ರಾ.ಶಾಲೆಯಲ್ಲಿ‌ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಕಮಲಾ ಕೆ.ಎಸ್.ರವರಿಗೆ ಗೌರವ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಮಲಾರವರು ನೆನಪಿನ ಕಾಣಿಕೆಯಾಗಿ ಶಾಲೆಯ ವಾಚನಾಲಯಕ್ಕೆ ಮೇಜಿನ ವ್ಯವಸ್ಥೆ ಕೊಡುಗೆಯಾಗಿ ನೀಡಿದರು. ಅಕ್ಷರದಾಸೋಹದ ಅಡುಗೆ ಸಿಬ್ಬಂದಿ ಮೀನಾಕ್ಷಿ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಅದೀಶ್ ಶೆಟ್ಟಿ, ಶ್ರಾವಣ್, ಧೀರಜ್ ಮತ್ತು ನವಣ್ ರೈರವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಸ್ಪರ್ಧಾ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸುಬ್ರಮಣ್ಯ ರೈ, ರೈ ಎಸ್ಟೇಟ್ ಕೋಡಿಂಬಾಡಿರವರು ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು‌.

ಪುಷ್ಪಲತಾ ಮೋನಡ್ಕ, ವಾರಿಜಾ ಎಂ. ಶೆಟ್ಟಿ ಬರಮೇಲು, ಲಕ್ಷ್ಮೀ ರಾಘವೇಂದ್ರ ರೈ ಕೈಪ, ಅಶೋಕ ಶೆಟ್ಟಿ ಸಿದ್ಧಕಟ್ಟೆರವರು ಸ್ಥಾಪಿಸಿರುವ ದತ್ತಿನಿಧಿ ಬಡ್ಡಿ ಹಣದ ಮೊತ್ತವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಹಶಿಕ್ಷಕಿ ಪದ್ಮಾವತಿ ಕೆ. ಸ್ವಾಗತಿಸಿ, ಶಿಕ್ಷಕಿ ಪುಷ್ಪಾವತಿ ಕೆ. ವಂದಿಸಿದರು. ಪ್ರಭಾರ ಮುಖ್ಯಗುರು ಲಕ್ಷ್ಮೀ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಗೌರವ ಶಿಕ್ಷಕರಿಗೆ ಗೌರವಧನ ನೀಡಲು ಸಹಕರಿಸಿದ ಡಾ.ಶಿವಪ್ರಕಾಶ್ ಮೋನಡ್ಕ, ಡಾ.ಜಯಪ್ರಕಾಶ್ ಮೋನಡ್ಕ, ಹುಸೇನ್ ಕೆ.ಬಿ.ಕೆ, ರುಕ್ಮ ನಾಯ್ಕ S.I. ಬೆಳ್ಳಾರೆ, ಪಿ. ಕೆ. ಎಸ್. ಗೌಡ ಪಿಲಿಗುಂಡ, ಪ್ರಶಾಂತ್ ಮಿತ್ತಳಿಕೆ, ಡೆನ್ನಿಸ್ ಸೇಡಿಯಾಪು, ಚಿತ್ರಾ ಸುರೇಶ್ ಗೌಡ ಬೋಳಾಜೆ, ಸುರೇಶ್ ಶೆಟ್ಟಿ ಬರಮೇಲುರವರಿಗೆ ಕೃತಜ್ಞತೆ ಸಲ್ಲಿಸಿದರು. ಗೌರವ ಶಿಕ್ಷಕಿ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಅಶ್ವಿತಾ ಸನ್ಮಾನಿತರ ವಿವರ ವಾಚಿಸಿದರು. ದೈ.ಶಿ.ಶಿಕ್ಷಕಿ ವಿಜಯಪ್ರಭು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ಶಾಲೆಯ ದಾನಿಗಳು, ಎಸ್. ಡಿ. ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಹಭೋಜನದ ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here